ಸಿದ್ದಾಪುರ : ತಾಲೂಕಿನ ವಾಜಗೋಡ ಗ್ರಾಮ ಪಂಚಾಯತದ ಮುಂದಿನ ಒಂದು ವರ್ಷದ ಅವಧಿಗೆ ಅಧ್ಯಕ್ಷೆಯಾಗಿ ಚಂದ್ರಕಲಾ ಶ್ರೀಧರ ನಾಯ್ಕ ಮುಂಡಿಗೆತಗ್ಗು ಅವಿರೋಧವಾಗಿ ಆಯ್ಕೆಗೊಂಡರು.
ತಾಲೂಕ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ದೇವರಾಜ್ ಹಿತ್ಲಕೊಪ್ಪ, ತಾಲೂಕ ಪಂಚಾಯತ ವ್ಯವಸ್ಥಾಪಕ ಬಸವರಾಜ ಚುನಾವಣೆ ಪ್ರಕ್ರಿಯೆ ನಡೆಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಸ್.ಎಂ. ಭಟ್, ಸದಸ್ಯರುಗಳಾದ ಸುರೇಶ ನಾಯ್ಕ್ ,ನಾಗರಾಜ ಗೌಡರ್ , ಯಶೋಧ ಹಸ್ಲರ್, ಲಲಿತಾ ಹಸ್ಲರ್, ಕಾಂಗ್ರೆಸ್ ಘಟಕ ಅಧ್ಯಕ್ಷ ಐ.ಕೆ. ನಾಯ್ಕ, ಪ್ರಮುಖರಾದ ಎನ್.ಟಿ. ನಾಯ್ಕ ಮಣಕಿನಗುಳಿ, ಬಿ. ಜಿ. ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು. ನೂತನ ಅಧ್ಯಕ್ಷರ ಆಯ್ಕೆಯಾದ ನಂತರ ಚಂದ್ರಕಲಾ ಅವರ ಅಭಿಮಾನಿಗಳು ಕಾಂಗ್ರೆಸ ಕಾರ್ಯಕರ್ತರು, ಪಂಚಾಯತ್ ಸಿಬ್ಬಂದಿಗಳು ಅಭಿನಂದಿಸಿ ಶುಭ ಕೋರಿದರು. 2021ರಿಂದ ಎರಡುವರೆ ವರ್ಷದ ಅವಧಿಗೆ ಈ ಮೊದಲು ಆಯ್ಕೆಯಾಗಿ ಎರಡನೇ ಬಾರಿಗೆ ಮತ್ತೆ ಅದೃಷ್ಟ ಒಲಿದು ಬಂದಿದೆ.