ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ.4, ಶನಿವಾರದಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5 ಘಂಟೆ ವರೆಗೆ ಪಟ್ಟಣ ಶಾಖಾ ವ್ಯಾಪ್ತಿಯ ಸಿ.ಪಿ.ಬಜಾರ, ಚಾಕಿಮಠ, ನಾಡಿಗಲ್ಲಿ, ದೇವಿಕೆರೆ, ಕೋರ್ಟ ರೋಡ, ಪಡ್ತಿಗಲ್ಲಿ ಹಾಗೂ ರಾಘವೇಂದ್ರ ಸರ್ಕಲ್ ಮಾರ್ಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.