ಶಿರಸಿ: ಉತ್ತರ ಕನ್ನಡ ಜಿಲ್ಲಾ ಸಂಸ್ಕಾರ ಭಾರತಿ ಸಂಸ್ಥೆಯ ಉದ್ಘಾಟನೆ ಹಾಗೂ ಸಾಧಕರಿಗೆ ಗೌರವ ಸಮ್ಮಾನ ನಗರದ ಯೋಗ ಮಂದಿರದಲ್ಲಿ ಜ.೪ರ ಸಂಜೆ ೪ಕ್ಕೆ ನಡೆಯಲಿದೆ.
ಉದ್ಘಾಟನೆಯನ್ನು ಪ್ರಸಿದ್ಧ ಕಲಾವಿದ ಪಂ.ಗಣಪತಿ ಭಟ್ಟ ಹಾಸಣಗಿ ನಡೆಸಲಿದ್ದು, ಅಧ್ಯಕ್ಷತೆಯನ್ನು ಸಂಸ್ಕಾರ ಭಾರತಿಯ ಪ್ರಾಂತ ಉಪಾಧ್ಯಕ್ಷ, ಕಲಾವಿದ ಶಿವಾನಂದ ಕೆರೆಮನೆ ಅಧ್ಯಕ್ಷತೆವಹಿಸಲಿದ್ದಾರೆ. ವಕ್ತಾರರಾಗಿ ವಿದುಷಿ ಹೇಮಾ ವಾಗ್ಮೋಡೆ ಭಾಗವಹಿಸಲಿದ್ದಾರೆ. ಉತ್ತರ ಪ್ರಾಂತ ಕಾರ್ಯದರ್ಶಿ ಮಾರುತಿ ಹುಟಗಿ ಉಪಸ್ಥಿತರಿರಲಿದ್ದಾರೆ.
ಇದೇ ವೇಳೆ ಸಾಧಕರಾದ ಕೇಶವ ಹೆಗಡೆ ಕೊಳಗಿ, ವಿ.ವಿ.ಡಿ.ಭಟ್ಟಕರಸುಳ್ಳಿ, ನಾಗೇಂದ್ರ ಮುತ್ಮುರ್ಡು, ನಿರ್ಮಲಾ ಗೋಳಿಕೊಪ್ಪ, ಸತೀಶ ಎಲೆಸರ, ವೇ.ಮೂ.ಮಂಜುನಾಥ ಭಟ್ಟ, ಲಲಿತಕಲಾ ಅಕಾಡಮಿ ಸದಸ್ಯೆ ಶಾಂತ ಕೊಲ್ಲೆ, ಕವಯತ್ರಿ ಪದ್ಮಾ ಎಸ್. ಅವರನ್ನು ಗೌರವಿಸಲಾಗುತ್ತದೆ ಎಂದು ಜಿಲ್ಲಾ ಘಟಕದ ಕಾರ್ಯದರ್ಶಿ ರವಿ ಗುನಗಾ ಗೋಕರ್ಣ ತಿಳಿಸಿದ್ದಾರೆ.