ಕೃತಜ್ಞತಾಪೂರ್ವಕ ಧನ್ಯವಾದಗಳು
ನಮ್ಮ ತಂದೆ ತಾಯಿಯವರ ವೈವಾಹಿಕ ಜೀವನದ 51ನೇ ವರ್ಷದ ಈ ಶುಭ ಸಂದರ್ಭದಲ್ಲಿ ಕರ್ನಾಟಕ ಸರಕಾರದಿಂದ “ಕರ್ನಾಟಕ ಸಹಕಾರ ರತ್ನ” ಪ್ರಶಸ್ತಿ ಹಾಗೂ ಅಖಿಲ ಹವ್ಯಕ ಮಹಾಸಭಾದಿಂದ ”ಹವ್ಯಕ ಸಾಧಕ ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದು ನಮಗೆ ತುಂಬಾ ಸಂತೋಷ ತಂದಿದೆ.
ಅವರು ಆರ್ಥಿಕ, ಧಾರ್ಮಿಕ ಹಾಗೂ ಸಾಮಾಜಿಕ ಮತ್ತು ಸಹಕಾರಿ ಕ್ಷೇತ್ರಗಳಲ್ಲಿ ಕಳೆದ 50 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ಗೌರವಿಸಿದೆ. ನಮ್ಮ ತಂದೆಯವರ ಈ ಸಾಧನೆಗೆ ನಮ್ಮ ತಾಯಿಯವರ ಸಹಕಾರ, ಶ್ರಮ ಕೂಡ ಸಹಕಾರಿಯಾಗಿದೆ.
ಕೆಲವೇ ದಿನಗಳ ಅಂತರದಲ್ಲಿ ಪ್ರತಿಷ್ಠಿತ ಎರಡು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ನೀಡಿದ ಕರ್ನಾಟಕ ಸರಕಾರಕ್ಕೆ ಹಾಗೂ ಅಖಿಲ ಹವ್ಯಕ ಮಹಾಸಭೆಗೆ ಕೃತಜ್ಞತಾಪೂರ್ವಕ ಧನ್ಯವಾದಗಳು.
ಮಕ್ಕಳಾದ:
ಶ್ರೀ ಸುಬ್ರಹ್ಮಣ್ಯ ಗೋಪಾಲಕೃಷ್ಣ ಹೆಗಡೆ, ಹಿರೇಸರ (ಉಡುಪಿ)
ಶ್ರೀ ರವೀಂದ್ರ ಗೋಪಾಲಕೃಷ್ಣ ಹೆಗಡೆ, ಹಿರೇಸರ
ಶ್ರೀಮತಿ ಸುಮಿತ್ರಾ ಮಂಜುನಾಥ ಹೆಗಡೆ, ಹಿರೇಸರ (ಬೆಂಗಳೂರು)
ಹೃತ್ಪೂರ್ವಕ ಅಭಿನಂದನೆಗಳು
ತಮ್ಮ ವೈವಾಹಿಕ ಜೀವನದ 51ನೇ ವರ್ಷದ ಸಂತೋಷದ ಸಂದರ್ಭದಲ್ಲಿ ವಿಶ್ವ ಹವ್ಯಕ ಸಮ್ಮೇಳನವು ನಮ್ಮ ಸಂಘದ ಅಧ್ಯಕ್ಷರಾದ ಶ್ರೀ ಜಿ.ಎನ್. ಹೆಗಡೆ ಹಿರೇಸರ ಇವರಿಗೆ ”ಹವ್ಯಕ ಸಾಧಕರತ್ನ” ಪ್ರಶಸ್ತಿ ನೀಡಿದ್ದು ಅತ್ಯಂತ ಸಂತೋಷ ತಂದಿದೆ. ಕೆಲವೇ ದಿನಗಳ ಅಂತರದಲ್ಲಿ ಕರ್ನಾಟಕ ಸರಕಾರದಿಂದ “ಸಹಕಾರ ರತ್ನ” ಪ್ರಶಸ್ತಿಗೆ ಕೂಡಾ ಭಾಜನರಾದ ನಮ್ಮ ಅಧ್ಯಕ್ಷರು, ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಸಹಕಾರ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದನ್ನು ಗುರುತಿಸಿ ಗೌರವಿಸಿರುವುದಕ್ಕೆ ಹೃತ್ತೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.
ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿ., ಹಿರೇಸರ