ಹೊನ್ನಾವರ: ತಾಲೂಕಿನ ಖರ್ವಾ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆ ಶನಿವಾರ ನಡೆದಿದ್ದು 3 ಅವಿರೋಧ ಆಯ್ಕೆಯಾಗಿದ್ದು, 8 ಮಂದಿ ಚುನಾವಣೆ ಪ್ರಕ್ರಿಯೆ ಮೂಲಕ ಆಯ್ಕೆಯಾದರು.
ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಗಜಾನನ ನಾರಾಯಣ ನಾಯ್ಕ, ದೇವ ಸುಬ್ಬಯ್ಯ ಗೌಡ, ವೆಂಕಟ್ರಮಣ ನಾರಾಯಣ ಗೌಡ, ಧರ್ಮ ಕೇಶ ಗೌಡ, ರಾಮಕೃಷ್ಣ ಗಣಪತಿ ನಾಯ್ಕ, ಮೋಹನ ನಾರಾಯಣ ಗೌಡ, ಹಿಂದುಳಿದ ‘ಅ’ ವರ್ಗ ಕ್ಷೇತ್ರದಲ್ಲಿ ಈಶ್ವರ ಮಂಜು ಗೌಡ,ಹಿಂದುಳಿದ ‘ಬ’ ವರ್ಗದಿಂದ ರೋನಿ ಜುರ್ನಿ ಲೋಪಿಸ್ ಆಯ್ಕೆಯಾಗಿದ್ದಾರೆ. ಮಹಿಳಾ ಮೀಸಲು ಕ್ಷೇತ್ರದಿಂದ ಗೌರಿ ಕೃಷ್ಣ ಗೌಡ, ವೀಣಾ ಈರಪ್ಪ ನಾಯ್ಕ,ಪರಿಶಿಷ್ಟ ಜಾತಿಯಿಂದ ಮಾದೇವ ಮಾಸ್ತಿ ಹಳ್ಳೇರ ಅವಿರೋಧವಾಗಿ ಆಯ್ಕೆಯಾಗಿದ್ದರು. ಮತದಾನ ಮುಕ್ತಾಯ ನಂತರ ಚುನಾವಣಾ ಅಧಿಕಾರಿ ಸರಿತಾ ಎಸ್. ಬೇತಾಳಕರ ಫಲಿತಾಂಶ ಘೋಷಣೆ ನಡೆಸಿದರು.
ಪರಾಜಿತಗೊಂಡ ಪ್ರಮುಖರು :
ಕೆ. ಡಿ. ಸಿ. ಸಿ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಭಟ್ಟ ಮತ್ತು ಗ್ರಾ. ಪಂ. ಸದಸ್ಯ ರಾಮ ಅಣ್ಣು ಗೌಡ ಪರಾಜಿತಗೊಂಡಿದ್ದಾರೆ. ಇವರೀರ್ವರು ಸಚಿವ ಮಂಕಾಳ್ ವೈದ್ಯರ ಆಪ್ತ ಬಳಗದಲ್ಲಿ ಗುರುತಿಸಿ ಕೊಂಡವರಾಗಿದ್ದರು. ಆಯ್ಕೆಯಾದ ಪ್ರಮುಖರಲ್ಲಿ ಮಾಜಿ ಅಧ್ಯಕ್ಷರುಗಳಾದ ಗಜಾನನ ನಾಯ್ಕ ಮತ್ತು ಈಶ್ವರ ಗೌಡ, ನೂತನ ನಿರ್ದೇಶ ಮೋಹನ ಗೌಡ ಇನ್ನೂ ಕೆಲವರು ಸಚಿವ ಮಂಕಾಳ್ ವೈದ್ಯರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರಾಗಿದ್ದಾರೆ.