ಹೊನ್ನಾವರ: ತಾಲೂಕಿನ ಹುಲಿಯಪ್ಪನ ಕಟ್ಟೆ ಹತ್ತಿರದ ಬಾಳೆಗದ್ದೆ ತಿರುವಿನಲ್ಲಿ ಟ್ಯೂರಿಸ್ಟ್ ಬಸ್ ಪಲ್ಟಿಯಾಗಿ ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಬೆಂಗಳೂರಿನಿಂದ ಗೋಕರ್ಣ ಪ್ರವಾಸಿಗರನ್ನು ಹೊತ್ತು ಹೊರಟಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿ, ಪ್ರವಾಸಿಗರು ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡ ಪ್ರವಾಸಿಗರನ್ನು ಹೆಚ್ಚಿನ ಚಿಕಿತ್ಸೆಗಾಗಿ, ಹೊರ ಜಿಲ್ಲೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರಿಂದ ಸೂಚನೆ ನೀಡಿದ್ದು, ಸಣ್ಣ ಪುಟ್ಟ ಗಾಯಾಳುಗಳಿಗೆ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಇತ್ತೀಚೆಗೆ ಬಾಳೆಗದ್ದೆ ತಿರುವಿನಲ್ಲಿ ಅಪಘಾತ ಸಂಖ್ಯೆಗಳು ಹೆಚ್ಚಾಗಿದ್ದು, ಹೆದ್ದಾರಿ ಇಲಾಖೆಯ ನಿರ್ಲಕ್ಷಕ್ಕೆ ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ.