ಹೊನ್ನಾವರ: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರಕಾಶಮಾನವಾಗುವಂತೆ ಮಾಡುವುದು ಅತ್ಯಗತ್ಯವಾಗಿದೆ ಎಂದು ವಿಶ್ರಾಂತ ಪ್ರಾಚಾರ್ಯರು ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಮೋಹನ ಹೆಗಡೆ ನುಡಿದರು.
ಇವರು ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ “ವಾರ್ಷಿಕ ಪ್ರತಿಭಾ ಪುರಸ್ಕಾರ” ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಶ್ರದ್ಧೆಯಿಂದ ಅಭ್ಯಾಸವನ್ನು ಮಾಡಿದರೆ ಯಶಸ್ಸು ಸಿಗುತ್ತದೆ, ಗುರುವಿನ ಪಾಠದಲ್ಲಿ ಗಮನವಿದ್ದರೆ ಹೆಚ್ಚು ಅಂಕಗಳನ್ನು ಗಳಿಸಬಹುದು ಎಂದು ನುಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಉಮೇಶ ಹೆಗಡೆ ಮಾತನಾಡಿ ಪ್ರಶಸ್ತಿ ಪಡೆದಾಗ ಆಗುವ ಸಂತೋಷಕ್ಕೆ ಪಾರವೇ ಇಲ್ಲ. ಬಹುಮಾನವನ್ನು ಪಡೆದ ಮುದ್ದು ಮಕ್ಕಳ ಮುಖವನ್ನು ಕಂಡಾಗ ಬಹು ಸಂತೋಷವಾಗುತ್ತದೆ ಎಂದರು.
ಮಾಜಿ ಪ್ರಧಾನಿ ದಿವಂಗತ ಡಾ. ಮನಮೋಹನ ಸಿಂಗ್ ರವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಆಡಳಿತಾಧಿಕಾರಿ ಎಂ.ಎಸ್. ಹೆಗಡೆ ಗುಣವಂತೆ,ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ನಯನ ನಾಯ್ಕ ಸ್ವಾಗತಿಸಿದರು, ರಮ್ಯಾ ಹೆಗಡೆ ವಂದಿಸಿದರು. ಕೀರ್ತಿ ನಾಯ್ಕ ನಿರೂಪಿಸಿದರು ಕು. ಮನೋಜ ಭಟ್ ಪ್ರಾರ್ಥಿಸಿದ್ದರು