ಬನವಾಸಿ: ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್‌ರವರಿಗೆ ಬನವಾಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಸಿ.ಎಫ್.ನಾಯ್ಕ ಮಾತನಾಡಿ, ದಿವಂಗತ ಮನಮೋಹನ್ ಸಿಂಗ್ ರವರು ಈ ದೇಶದ ಶ್ರೇಷ್ಠ ಪ್ರಧಾನ ಮಂತ್ರಿಗಳಲ್ಲಿ ಒಬ್ಬರು,ಈ ದೇಶ ಆರ್ಥಿಕ ಸಂಕಷ್ಟದಲ್ಲಿದ್ದಾಗ ಅದನ್ನು ಅವರ ಚಾಣಾಕ್ಷತೆಯಿಂದ ಪಾರು ಮಾಡಿ ದೇಶದ ಸುಭದ್ರತೆಗೆ ಕಾರಣರಾದವರು. ದೇಶದ ಪ್ರತಿಯೊಬ್ಬರ ಹಿತವನ್ನು ಬಯಸಿದವರು ಆದರ್ಶ ವ್ಯಕ್ತಿತ್ವ ಮೈಗೂಡಿಸಿಕೊಂಡವರು,ರೈತರ ಏಳಿಗೆಗೆ ಶ್ರಮಿಸಿದವರು ಅವರು ಪ್ರಧಾನಮಂತ್ರಿ ಆದಂತ ಸಮಯದಲ್ಲಿ ರೈತರ ಸಾಲಮನ್ನಾ ಮಾಡಿದ ಪುಣ್ಯಾತ್ಮರು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಬನವಾಸಿ ಘಟಕಾಧ್ಯಕ್ಷರಾದ ಅಲ್ತಾಫ್ ಚೌದರಿ,ಗುಡ್ನಾಪುರ ಪಂಚಾಯತ್ ಘಟಕಾಧ್ಯಕ್ಷರು ಆನಂದ್ ಮಧುರವಳ್ಳಿ, ಜಿಲ್ಲಾ ಸಮಿತಿ ಸದಸ್ಯ ಪುಟ್ಟಪ್ಪ ನಾಯ್ಕ, ಕಿರಣ್ , ಶೌಕತ್ ಬೇಗ್,ಪಯಾಜ್ ಮುಂತಾದವರು ಉಪಸ್ಥಿತರಿದ್ದರು.