Slide
Slide
Slide
previous arrow
next arrow

ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್: ಅಂಬಿಕಾನಗರದ ತೇಜಸ್ ಪ್ರಥಮ

300x250 AD

ದಾಂಡೇಲಿ : ಹುಬ್ಬಳ್ಳಿಯಲ್ಲಿ ನಡೆದ ಪ್ರೀಮಿಯರ್ ಕರಾಟೆ ರಾಷ್ಟ್ರೀಯ ಚಾಂಪಿಯನ್ ಶಿಪ್ -2024ರ 50 ರಿಂದ 65 ಕೆ.ಜಿ ವಿಭಾಗದ ರಾಷ್ಟ್ರಮಟ್ಟದ ಕರಾಟೆ ಕುಮಿಟೆ ಫೈಟ್’ನಲ್ಲಿ ತಾಲೂಕಿನ ಅಂಬಿಕಾನಗರದ ತೇಜಸ್ ಆರ್.ಮತ್ತೂರು ಈತನು ಅಮೋಘ ಪ್ರದರ್ಶನವನ್ನು ನೀಡಿ ಪ್ರಥಮ ಸ್ಥಾನವನ್ನು ಪಡೆದು, ತಾಲೂಕಿಗೆ ಮತ್ತು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾನೆ.

ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ರಾಷ್ಟ್ರಮಟ್ಟದ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ತೇಜಸ್ ಆರ್. ಮತ್ತೂರು ಅತ್ಯುತ್ತಮ ಪ್ರದರ್ಶನವನ್ನು ತೋರಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿರುವುದರ ಜೊತೆಗೆ ಸಣ್ಣ ವಯಸ್ಸಿನಲ್ಲಿಯೇ ರಾಷ್ಟ್ರಮಟ್ಟದ ಸಾಧನೆಯನ್ನು ಮಾಡಿದ ಹಿರಿಮೆಗೆ ಪಾತ್ರನಾಗಿದ್ದಾನೆ.

ನಗರದ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಯಾಗಿರುವ ತೇಜಸ್ ಆರ್.ಮತ್ತೂರು ಈತನು ಅಂಬಿಕಾನಗರದ ಕೆಪಿಸಿ ಉದ್ಯೋಗಿ ಹಾಗೂ ಕರಾಟೆ ತರಬೇತುದಾರರಾದ ರಾಮ್ ಮತ್ತೂರು ಮತ್ತು ಅನುರಾಧ.ಆರ್.ಮತ್ತೂರು ದಂಪತಿಗಳ ಸುಪುತ್ರನಾಗಿದ್ದಾನೆ. ತಂದೆ ಕರಾಟೆ ತರಬೇತುದಾರ ರಾಮ್‌ ಮತ್ತೂರು ಅವರೇ ಈತನಿಗೆ ಕರಾಟೆ ತರಬೇತುದಾರರಾಗಿರುವುದು ವಿಶೇಷ.

300x250 AD

ಜಿಲ್ಲೆ, ರಾಜ್ಯ, ಹೊರ ರಾಜ್ಯಗಳಲ್ಲಿ ಆಯೋಜಿಸಲಾಗಿದ್ದ ಸಾಕಷ್ಟು ಕರಾಟೆ ಸ್ಪರ್ಧೆಗಳಲ್ಲಿ ತೇಜಸ್ ಆರ್.ಮತ್ತೂರು ಈತನು ಭಾಗವಹಿಸಿ ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾನೆ. ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಬಾಚಿಕೊಂಡ ತೇಜಸ್ ಆರ್.ಮತ್ತೂರು ಈತನ ಸಾಧನೆಗೆ ತಾಲೂಕಿನ ಗಣ್ಯರನೇಕರು ಹರ್ಷವನ್ನು ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Share This
300x250 AD
300x250 AD
300x250 AD
Back to top