Slide
Slide
Slide
previous arrow
next arrow

ಮನೆಯ ಕೆನೋಪಿಯಿಂದ ಬಿದ್ದು ಯುವಕ ಸಾವು

300x250 AD

ಭಟ್ಕಳ: ಮನೆಯ ಕೆನೋಪಿಯಲ್ಲಿ ಆಯತಪ್ಪಿ ಬಿದ್ದು ಅಧಿಕ ರಕ್ತಸೋರಿಕೆಯಿಂದ ಆಸ್ಪತ್ರೆ ಸೇರಿದ್ದ ಯುವಕನೊರ್ವ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ನಸುಕಿನ ವೇಳೆ ಮೃತಪಟ್ಟಿದ್ದಾನೆ.

ಕುಮಟಾದ ಗಾಂಧಿನಗರದ ನಿವಾಸಿ ಪ್ರಸ್ತುತ ಮುರ್ಡೇಶ್ವರ ವಾಸಿಸುತ್ತಿದ್ದ ಅನೂಪ ನಾಗೇಶ ಶೆಟ್ಟಿ (೩೫) ಮೃತ ಯುವಕ. ಇವರು ಭಟ್ಕಳದ ಸರ್ವೇ ಕಚೇರಿಯಲ್ಲಿ ಸರ್ವೇಯರ್ ಆಗಿ ವೃತ್ತಿ ಮಾಡುತ್ತಿದ್ದರು. ಹೆಂಡತಿ ಮಕ್ಕಳೊಂದಿಗೆ ಮುರ್ಡೇಶ್ವರದ ಸಣಬಾವಿಯ ಬಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಗುರುವಾರ ರಾತ್ರಿ ತಾವು ವಾಸವಿದ್ದ ಬಾಡಿಗೆ ಮನೆಯ ಕೆನೊಪಿಯಲಿ ಆಯ ತಪ್ಪಿ ಮನೆಯ ಮುಂಬದಿಯ ಕಿಟಕಿಯಿಂದ ಗಾಜಿನ ಮೇಲೆ ಬಿದ್ದ ಪರಿಣಾಮ ಆತನ ಬಲ ಮುಂಗೈ ಮೇಲಿನ ರಕ್ತನಾಳಕ್ಕೆ ಗಾಯವಾಗಿ ರಕ್ತಸ್ರಾವವಾಗಿತ್ತು. ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದು, ವಿಪರೀತ ರಕ್ತಸ್ರಾವವಾಗಿ ಶುಕ್ರವಾರ ನಸುಕಿನ ಜಾವ ಮೃತಪಟ್ಟಿದ್ದಾರೆ. ಈ ಕುರಿತು ಮೃತರ ತಂದೆ ನಾಗೇಶ ಶೆಟ್ಟಿ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top