ಸಿದ್ದಾಪುರ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾರತ ಕಂಡ ಅತ್ಯಂತ ಶ್ರೇಷ್ಠ ಆರ್ಥಿಕ, ರಾಜಕೀಯ ಮುತ್ಸದ್ದಿಯಾಗಿದ್ದರೆಂದು ಗೋಪಾಲ ನಾಯ್ಕ ಸ್ಮರಿಸಿದರು.
ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಛೇರಿಯಲ್ಲಿ ಏರ್ಪಡಿಸಿದ್ದ ಶೃದ್ದಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಡಾ.ಮನಮೋಹನ್ ಸಿಂಗ್ ದೇಶದ ಮೂಲೆಮೂಲೆಗಳಲ್ಲಿನ ಗ್ರಾಮೀಣ ಬಡಜನತೆಗೂ ಸಹ ಲಕ್ಷಾಂತರ ಉದ್ಯೋಗ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದರೆಂದರು.
ಉಪನ್ಯಾಸಕ ರತ್ನಾಕರ್ ನಾಯ್ಕ ಮಾತನಾಡಿ ಕೂಗು ಭಾರತದಲ್ಲಿ ಮೌನ ಸಾಧನೆ ಮಾಡಿದ ಆರ್ಥಿಕ ಹರಿಕಾರ ಮನಮೋಹನ್ ಅವರಾಗಿದ್ದರೆಂದರು.
ಪತ್ರಕರ್ತ ಕನ್ನೇಶ ಕೋಲಸಿರ್ಸಿ ಮಾತನಾಡಿ, ಸಿಂಗ್ ಅವರ ರಾಜಕೀಯ ದೂರದೃಷ್ಟಿ ಹಾಗೂ ಅರ್ಥವ್ಯವಸ್ಥೆಯನ್ನು ದೇಶ ಸರಿಯಾಗಿ ಬಳಸಿಕೊಂಡಿತೆಂದರು.
ಈ ಸಮಯದಲ್ಲಿ ಅಂಕಣಕಾರ ಸುರೇಂದ್ರ ದಪೇದಾರ ,ಕೋಶಾಧ್ಯಕ್ಷ ಪಿ.ಬಿ. ಹೊಸೂರು, ಕಾರ್ಯದರ್ಶಿಗಳಾದ ಅಣ್ಣಪ್ಪ ನಾಯ್ಕ, ಪ್ರಶಾಂತ ಶೇಟ, ಪದಾಧಿಕಾರಿಗಳಾದ ಚಂದ್ರಶೇಖರ ಕುಂಬ್ರಿಗದ್ದೆ, ಟಿ.ಕೆ.ಎಮ್. ಅಜಾದ, ಬಿಎಸ್ಎನ್ ಡಿ.ಪಿ ಅಧ್ಯಕ್ಷ ವಿನಾಯಕ ನಾಯ್ಕ ಮುಂತಾದವರು ಉಪಸ್ಥಿತಿದ್ದರು.