ಜೋಯಿಡಾ : ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಆತ್ಮಕ್ಕೆ ಶಾಂತಿ ಕೋರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದಲ್ಲಿರುವ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಮಾಜಿ ಪ್ರಧಾನಿ ದಿ. ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ಗೌರವ ಸಲಿಸಲಾಯಿತು. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಎರಡು ನಿಮಿಷಗಳ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ ಹಲವಾಯಿ, ನಗರ ಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ, ಪಕ್ಷದ ಮುಖಂಡರುಗಳಾದ ತಸ್ವರ್ ಸೌದಗಾರ, ಕರೀಂ ಅಜ್ರೇಕರ, ಆರ್.ಪಿ.ನಾಯ್ಕ, ದಿವಾಕರ ನಾಯ್ಕ, ಕೀರ್ತಿ ಗಾಂವಕರ, ಎಂ.ಬಿ. ಅಪ್ಪಣ್ಣಗೌಡರ, ರಫೀಕ್ ಖಾನ್, ಶಿವಪ್ಪ ನಾಯ್ಕ, ಪ್ರತಾಪ ಸಿಂಗ್ ರಜಪೂತ್, ತುಕರಾಮ ಪರಸೋಜಿ, ರವಿಕುಮಾರ್ ಚಾಟ್ಲಾ, ಮ್ಯಾಥೂಸ್, ರಾಜಶೇಖರ ನಿಂಬಾಳ್ಕರ, ನಗರಸಭೆಯ ಸದಸ್ಯರುಗಳಾದ ಯಾಸ್ಮಿನ್ ಕಿತ್ತೂರು, ಸರಸ್ವತಿ ರಜಪೂತ್, ಮಜಿದ್ ಸನದಿ, ಸವಿತಾ ದಂಡಗಿ, ಪಕ್ಷದ ಪ್ರಮುಖರಾದ ರೇಣುಕಾ ಮಾದರ, ಸರಸ್ವತಿ ಚೌವ್ಹಾಣ್, ಲಕ್ಷ್ಮೀ ಬೋವಿ, ವಿದ್ಯಾ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.