ಶಿರಸಿ: ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಘ ಹಾಗೂ ಕರ್ನಾಟಕ ರಾಜ್ಯ ಚದುರಂಗ ಸಂಘದ ಶುಭ ಚಿಹ್ನೆಯೊಂದಿಗೆ ಜ:5, ಭಾನುವಾರ ಮುಂಜಾನೆ 9 ಗಂಟೆಗೆ ಮುಕ್ತ ಚದುರಂಗ ಪಂದ್ಯಾವಳಿಯನ್ನು ಕಡವೆ ಶ್ರೀಪಾದ ಹೆಗಡೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಪಂದ್ಯಾವಳಿಯು ನಗದು ಹಾಗೂ ಟ್ರೋಫಿಗಳನ್ನೊಳಗೊಂಡಿರುತ್ತದೆ. ವಯೋಮಿತಿ 16, 14, 12, 10, 8, ಹಾಗೂ ಉತ್ತಮ ಕಿರಿಯ ಆಟಗಾರ ಪ್ರಶಸ್ತಿ, ಉತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಗಳು, ವಯೋಮಿತಿ 45, 50, 55, 60 ವರ್ಷ ಮೇಲ್ಪಟ್ಟ ಪ್ರಶಸ್ತಿಗಳು, ಉತ್ತಮ ಜಿಲ್ಲಾ ಆಟಗಾರ ಪ್ರಶಸ್ತಿ, ಉತ್ತಮ ಅಂಗವಿಕಲ ಪ್ರಶಸ್ತಿಗಳನ್ನೂ ಸಹ ಪಂದ್ಯಾವಳಿಯು ಒಳಗೊಂಡಿರುತ್ತದೆ. ಪ್ರವೇಶ ಶುಲ್ಕ ರೂ. 600 ಮಾತ್ರ ಇರುವುದು. ಪಂದ್ಯಾವಳಿಯು ಫಿಡೆ ಸ್ವಿಸ್ ಮಾದರಿಯಲ್ಲಿ 15 ನಿಮಿಷ ಮತ್ತು 5 ಸೆಕೆಂಡ್ ಪ್ರತಿ ನಡೆಗೆ ಹೆಚ್ಚುವರಿ ಸೇರ್ಪಡೆಯಾಗಿ ಜರುಗಲಿದೆ.
ಆಸಕ್ತ ಚದುರಂಗ ಆಟಗಾರರು ದಿನಾಂಕ; 3-1-2024 ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸುವದು ಖಡ್ಡಾಯವಾಗಿರುತ್ತದೆ. ಉಚಿತವಾಗಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಆಟಗಾರರಿಗೆ ಸ್ಥಳದಲ್ಲಿಯೇ ಕಲ್ಪಿಸಲಾಗುವದು. ಆಟಗಾರರು ತಮ್ಮ ನೊಂದಣಿಯನ್ನು ನವೀನ ಶ್ರೀ. ಹೆಗಡೆ ವಾಟ್ಸ್ಆಪ್ ನಂ. 9480621062 ಕ್ಕೆ ಜಿ-ಪೇ ಅಥವಾ ಫೋನ್ ಪೇ ಮುಖಾಂತರ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನವೀನ ಹೆಗಡೆ ಅಥವಾ ರವಿ ಹೆಗಡೆ ಮೊ: ಇವರನ್ನು ಸಂಪರ್ಕಿಸಲಾಗಿದೆ.
ಜ.5ಕ್ಕೆ ಶಿರಸಿಯಲ್ಲಿ ಮುಕ್ತ ಚದುರಂಗ ಪಂದ್ಯಾವಳಿ
![](https://euttarakannada.in/wp-content/uploads/2021/08/euk-logo-1-640x438.jpg?v=1628473623)