ಸಿದ್ದಾಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿದ್ದಾಪುರದಲ್ಲಿ ಬ್ಯಾಂಕಿಂಗ್ ಹಣಕಾಸು ಮತ್ತು ವಿಮಾ ಸೇವೆಗಳ ಕುರಿತು ತರಬೇತಿ ಕಾರ್ಯಕ್ರಮವನ್ನು ಬಿಎ ಹಾಗೂ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಕಾಲೇಜಿನ ಉದ್ಯೋಗ ಕೋಶ, ಅರ್ಥಶಾಸ್ತ್ರ ವಿಭಾಗ ಹಾಗೂ ಐಕ್ಯುಎಸಿ ಘಟಕಗಳ ವತಿಯಿಂದ ಕ್ಯು ಸ್ಪೈಡರ್ಸ್ ಕಂಪನಿಯ ಸಹಯೋಗದ ಜೊತೆ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳಲ್ಲಿ ಬ್ಯಾಂಕಿಂಗ್ ಹಣಕಾಸು ಮತ್ತು ವಿಮಾ ಕ್ಷೇತ್ರಗಳಲ್ಲಿ ಇರುವ ಉದ್ಯೋಗವಕಾಶಗಳು ಹಾಗೂ ಅದಕ್ಕೆ ಅಗತ್ಯವಿರುವ ತರಬೇತಿಯನ್ನು ನೀಡುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ತರಬೇತಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮುಂದಿನ ಹಂತದಲ್ಲಿ 3 ತಿಂಗಳು ಉದ್ಯೋಗಕ್ಕೆ ಸಂಬಂಧಿಸಿದ ಉಚಿತ ತರಬೇತಿಯನ್ನು ನೀಡಲಾಗುವುದು. ಈ ತರಬೇತಿಯಲ್ಲಿ ಕುಮಾರಿ ಮೈತ್ರಿ ಮಧುಸೂದನ, ಕುಮಾರಿ ಪ್ರಿಯಾ ಎ, ಕುಮಾರ ಜೀವನಕುಮಾರ ಹಾಗೂ ಕುಮಾರ ಮಂಜುನಾಥ ಗೌಡ ಆಯ್ಕೆಯಾದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ ಸತೀಶ ಎನ್ ನಾಯ್ಕ ರವರು ವಹಿಸಿದ್ದರು. ಉದ್ಯೋಗ ಕೋಶದ ಸಂಚಾಲಕರಾದ ಡಾ.ಜಿ.ಕೆ ಚೇತನ್ ಕುಮಾರ, ಐಕ್ಯುಎಸಿ ಘಟಕದ ಸಂಚಾಲಕರಾದ ಡಾ. ರಶ್ಮಿ ಎನ್. ಕರ್ಕಿ, ಸಹಾಯಕ ಪ್ರಾಧ್ಯಾಪಕರಾದ ನಯನ ಎಸ್. ಹಾಗೂ ದಿವಾಕರ ಎಸ್.ಎಚ್.ರವರು ಉಪಸ್ಥಿತರಿದ್ದರು.