ಹೊನ್ನಾವರ : ಪಟ್ಟಣದ ಪ್ರಭಾತನಗರದ ಯಶಸ್ ಪ್ರಭಾಕರ್ ಮೇಸ್ತಾ ಒಡಿಸ್ಸಾದ ಪುರಿಯಲ್ಲಿ ನಡೆದ ಒಂಬತ್ತನೇ ರಾಷ್ಟ್ರೀಯ ವುಶು ಕುಂಗ್ ಫು ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಮತ್ತು ಬೆಸ್ಟ್ ಫೈಟರ್ ಅವಾರ್ಡ್ 2024 ಪಡೆದಿರುತ್ತಾನೆ.
ಈತ ಪ್ರಭಾತನಗರದ ಹೋಲಿ ರೋಜರಿ ಕಾನ್ವೆಂಟ್ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ರಾಯಲ್ ಅಕಾಡೆಮಿಯ ರಾಘವೇಂದ್ರ ಹೊನ್ನಾವರ ಹಾಗೂ ವಿದ್ಯಾ ಭಂಡಾರಿಯವರಲ್ಲಿ ತರಬೇತಿ ಪಡೆದಿರುತ್ತಾನೆ. ಶಾಲಿನಿ ಹಾಗು ಪ್ರಭಾಕರ ಮೇಸ್ತಾ ಪುತ್ರನಾಗಿರುತ್ತಾನೆ.
ಇತನ ಸಾಧನೆಗೆ ಶಾಲಾ ಕಾಲೇಜು ಸಿಬ್ಬಂದಿ ವರ್ಗ, ಸಹಪಾಠಿ ವಿದ್ಯಾರ್ಥಿಗಳು ಹಾಗೂ ಊರಗಣ್ಯರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.