ಶಿರಸಿ: ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯನ್ನು ಮೊದಲ ಬಾರಿಗೆ ಕಾರವಾರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿತ್ತು. ಈ ಚಾಂಪಿಯನ್ ಶಿಪ್ನಲ್ಲಿ ಕಳೆದ 30 ವರ್ಷದಿಂದಲೂ ಚಾಂಪಿಯನ್ ಶಿಪ್ ಉಳಿಸಿಕೊಂಡು ಬಂದಿರುವ ಶಿರಸಿಯ ಶೋಟೋಕನ್ ಕರಾಟೆ ಅಸೋಸಿಯೇಷನ್ ವಿದ್ಯಾರ್ಥಿಗಳು ಭಾಗವಹಿಸಿ ಮತ್ತೊಮ್ಮೆ ಚಾಂಪಿಯನ್ರಾಗಿ ಶಿರಸಿಗೆ ಹೆಮ್ಮೆ ತಂದಿದ್ದಾರೆ. ವಿದ್ಯಾರ್ಥಿಗಳ ಅರ್ಜುನ್ ಆರ್. ಸಕಲಾತಿ, ಅವನಿ ಹೆಗಡೆ, ಧನ್ವಿತ್ ಎಂ. ನಾಯಕ್, ಶ್ರೇಯಸ್ ನಾಯ್ಕ್, ಹಾರ್ದಿಕ್ ನಾಯಕ್, ಚಿನ್ಮಯ್ ಆರ್. ಗೊಂಕರ್, ರಿತು ಎಚ್. ಚೌದ್ರಿ, ಪೂರ್ವಿ ವಿ. ಬಾಂಬೆಕರ್, ಖುಷಿ ಕೆ.ಎ., ಶಶಾಂಕ್ ಕುಲಕರ್ಣಿ, ಅದ್ವಯ್ ಹಾಗೂ ಶಿಕ್ಷಕರಾದ ಸಂದೀಪ್ ನಾಯಕ್ ಇವರೆಲ್ಲರ ಸಾಧನೆಗೆ ಮುಖ್ಯ ಶಿಕ್ಷಕರಾದ ಶಿಹಾನ್ ಬಿಎಸ್ ಸೂರಜ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕರಾಟೆ ಪಂದ್ಯಾವಳಿ: ಶಿರಸಿ ವಿದ್ಯಾರ್ಥಿಗಳ ಸಾಧನೆ
