ಶಿರಸಿ: ಶಿವಮೊಗ್ಗದ ನಾಟ್ಯಶ್ರೀ ಕಲಾ ತಂಡ ಹಾಗೂ ಶ್ರೀಗುರು ಯಕ್ಷಗಾನ ಮಂಡಳಿಯಿಂದ ಪ್ರಥಮ ಬಾರಿಗೆ ನಗರದ ರಂಗಧಾಮದಲ್ಲಿ ಡಿ.೧೫ ರಂದು ಸಂಜೆ ೪.೩೦ ರಿಂದ ರಾತ್ರಿ ೧೦ ಗಂಟೆಯವರೆಗೆ ನಾಟ್ಯಶ್ರೀ ರಜತ ನೂಪುರ ೨೫ ಹಿನ್ನೆಲೆಯಲ್ಲಿ ಡಗು ತಿಟ್ಟಿನ ಕಲಾವಿದರಿಂದ ಪೌರಾಣಿಕ ಯಕ್ಷಗಾನ ನಡೆಯಲಿದೆ.
ಸಂಜೆ 4.30 ರಿಂದ 6.30 ರವರೆಗೆ ಕೃಷ್ಣಾರ್ಜುನ, ಸಂಜೆ 6.30 ರಿಂದ 8.30 ರವರೆಗೆ ಹನುಮಾನುರ್ಜುನ, 8.30 ರಿಂದ 9.50 ರವರೆಗೆ ಸುಧನ್ವಾರ್ಜುನ ಯಕ್ಷಗಾನ ನಡೆಯಲಿದೆ. ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ, ರಾಮಕೃಷ್ಣ ಹೆಗಡೆ ಹಿಲ್ಲೂರು, ಸರ್ವೇಶ್ವರ ಹೆಗಡೆ ಮೂರೂರು, ಗಜಾನನ ಭಟ್ಟ ತುಳಗೇರಿ, ಶಂಕರ ಭಾಗ್ವತ್ ಯಲ್ಲಾಪುರ, ಅನಿರುದ್ಧ ಹೆಗಡೆ ವರ್ಗಾಸರ, ವಿಘ್ನೇಶ್ವರ ಕೆಸರಕೊಪ್ಪ, ಗಣೇಶ ಗಾಂವ್ಕರ, ಮುಮ್ಮೇಳದಲ್ಲಿ ಕೃಷ್ಣಯಾಜಿ ಬಳ್ಕೂರು, ಕೊಂಡದಕುಳಿ ರಾಮಚಂದ್ರ ಹೆಗಡೆ, ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ, ಗಣಪತಿ ಹೆಗಡೆ ತೋಟಿಮನೆ, ಅಶೋಕ ಭಟ್ಟ ಸಿದ್ದಾಪುರ, ಸುಜಯೀಂದ್ರ ಹಂದೆ ಕೋಟ, ವಿ.ದತ್ತಮೂರ್ತಿ ಭಟ್ಟ, ಪ್ರಭಾಕರ ಹೆಗಡೆ ಹಣಜಿಬೈಲ್, ಸದಾಶಿವ ಭಟ್ಟ ಯಲ್ಲಾಪುರ, ವೆಂಕಟೇಶ ಬಗರಿಮಕ್ಕಿ, ಲಕ್ಷ್ಮೀನಾರಾಯಣ ಶಿರಗುಣಿ, ನವ್ಯ ಡಿ.ಭಟ್, ಅವಿನಾಶ ಕೊಪ್ಪ, ತುಳಸಿ, ಹೆಗಡೆ, ತನ್ಮಯ ಹೆಗಡೆ ಪಾಲ್ಗೊಳ್ಳಲಿದ್ದಾರೆ.
ಸಂಜೆ 4.30 ರಿಂದ 5 ಗಂಟೆಯವರೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಲಿದ್ದು, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಶಿವರಾಮ ಶೆಟ್ಟಿ ತಲ್ಲೂರು ಅಧ್ಯಕ್ಷತೆ ವಹಿಸಲಿದ್ದಾರೆ. ಉಪೇಂದ್ರ ಪೈ, ಆರ್.ಎಂ.ಹೆಗಡೆ ಬಾಳೇಸರ, ಮೋಹನ ಹೆಗಡೆ ಹೆರವಟ್ಟಾ, ನಾರಾಯಣ ಯಾಜಿ ಸಾಲೆಬೈಲ್, ಎಸ್.ಕೆ.ಭಾಗ್ವತ್, ವಿನಾಯಕ ಹೆಗಡೆ ದೊಡ್ಮನೆ, ಅನಂತಮೂರ್ತಿ ಹೆಗಡೆ, ಜಿ.ಎಲ್.ಹೆಗಡೆ ಕುಮಟಾ, ರವಿ ಹೆಗಡೆ ಹೂವಿನಮನೆ ಉಪಸ್ಥಿತರಿರಲಿದ್ದಾರೆ.
ಬಂಗಾರೇಶ್ವರ ಹೆಗಡೆ ತುಂಬೆಮನೆ, ಜಿ.ಕೆ.ಭಟ್, ಹೆಚ್.ಬಿ.ನಾಯಕ, ವೆಂಕಟೇಶ ಗೌಡ ಹೇರೂರು, ನಾಗರಾಜ ಜೋಶಿ ಸೋಂದಾ, ಕೊಳಗಿ ಕೇಶವ ಹೆಗಡೆ, ಎಂ.ಸಿ.ಹೆಬ್ಬಾರ್ ಉಡುಪಿ, ಎಂ.ಆರ್.ಯಾಜಿ ಸಾಲೆಬೈಲು, ನಿರ್ಮಲಾ ಗೋಳಿಕೊಪ್ಪ, ಜಿ.ಪಿ.ಪ್ರಭಾಕರ ಉಡುಪಿ ಇವರಿಗೆ ನಾಟ್ಯಶ್ರೀ ರಜತ ನೂಪುರ ಗೌರವ ನೀಡಿ, ಸನ್ಮಾನಿಸಲಾಗುವುದು ಎಂದು ಸಂಘಟಕ, ಕಲಾವಿದ ವಿ.ದತ್ತಮೂರ್ತಿ ಭಟ್ಟ ಶಿವಮೊಗ್ಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.