ಶಿರಸಿ : ತಾಲೂಕಿನ ಹುಲೇಕಲ್ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಹುಲೇಕಲ್ ಇದರ ಮುಂದಿನ ೫ ವರ್ಷದ ಆಡಳಿತ ಮಂಡಳಿಗೆ ಹಾಲಿ ಅಧ್ಯಕ್ಷ ವಿರೇಂದ್ರ ಪುಟ್ಟಪ್ಪ ಗೌಡರ್ ನೇತೃತ್ವದ ತಂಡ ಗೆಲುವು ಸಾಧಿಸಿದೆ.
ಭಾನುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ಅನಂತ ಭಟ್, ರಾಜಾರಾಮ ಹೆಗಡೆ, ನಾಗೇಶ ಶೇಟ್, ಪದ್ಮನಾಭ ಹೆಗಡೆ, ಮಂಜುನಾಥ ಗೌಡರ್ ಹಾಗೂ ಮಧುಕರ ಅನಂತ ಹೆಗಡೆ ಬಹುಮತದಿಂದ ಗೆಲುವು ಸಾಧಿಸಿದರು. ಸಂದೇಶ ಭಟ್ ಪರಾಭವಗೊಂಡರು.
ಇದಕ್ಕೂ ಮೊದಲು ಹಾಲಿ ಅಧ್ಯಕ್ಷ ವಿರೇಂದ್ರ ಗೌಡರ್, ತಾರಾ ನಾಯ್ಕ, ಗೀತಾ ಹೆಗಡೆ ಹಾಗೂ ಸುರೇಶ ನೇತ್ರೇಕರ್ ಅವಿರೋಧವಾಗಿ ಆಯ್ಕೆಯಾಗಿದ್ದರು. ಚುನಾವಣಾಧಿಕಾರಿಯಾಗಿ ಮಾಮಾಜಾನ್ ಕರ್ತವ್ಯ ನಿರ್ವಹಿಸಿದರು.