ಕುಮಟಾ: ತಾಲೂಕಿನ ಗೋಕರ್ಣದ ಶ್ರೀ ಭದ್ರಕಾಳಿ ಪ್ರೌಢಶಾಲೆಯಲ್ಲಿ ಒಂಭತ್ತನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಫರಾಕ್ ರಾಷ್ಟ್ರೀಯ ಸರ್ವೇಕ್ಷಣ ಪರೀಕ್ಷೆ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಡಯಟ್ ಕುಮಟಾ ಪ್ರಾಂಶುಪಾಲ ಶಿವರಾಮ್ ಹಾಗೂ ಡಯಟಿನ ಹಿರಿಯ ಉಪನ್ಯಾಸಕರಾದ ಗೋಪಾಲಕೃಷ್ಣ ಭಟ್ ಈರ್ವರು ಭೇಟಿಕೊಟ್ಟು ಪರೀಕ್ಷಾ ಕೊಠಡಿಯಲ್ಲಿ ವೀಕ್ಷಣೆ ಮಾಡಿದರು. ವಿದ್ಯಾರ್ಥಿಗಳು, ಪರೀಕ್ಷೆಯ ವೀಕ್ಷಕರಾದ ಶಿಕ್ಷಕ ರಮೇಶ್ ವಿ.ನಾಯ್ಕ ಮತ್ತು ಕ್ಷೇತ್ರ ತನಿಖಾಧಿಕಾರಿ ಡಯಟ್ ಡಿಇಡಿ ವಿದ್ಯಾರ್ಥಿನಿ ಕುಮಾರಿ ಆರತಿ ಎನ್. ಮುಕ್ರಿ ಸಮ್ಮುಖದಲ್ಲಿ ಶಾಲೆಯ ಮುಖ್ಯ ಅಧ್ಯಾಪಕರಾದ ಸಿ ಜಿ ನಾಯಕ್ ದೊರೆ ಹಾಗೂ ವೃತ್ತಿ ಬಾಂಧವರ ಸಹಕಾರದಲ್ಲಿ ಪರೀಕ್ಷೆ ಬರೆಯುತ್ತಿದ್ದು, ಪರೀಕ್ಷೆಯ ಎಲ್ಲಾ ವಿಧಿ ವಿಧಾನಗಳನ್ನು ಪರಿಶೀಲಿಸಿ ಅತ್ಯುತ್ತಮವಾಗಿ ಯಾವುದೇ ಹಸ್ತಕ್ಷೇಪವಿಲ್ಲದೆ ಸರ್ಕಾರಿ ನಿಯಮಗಳಿಗೆ ಅನುಗುಣವಾಗಿ ಪರೀಕ್ಷೆ ನಡೆಸಿದ ಕ್ರಮಕ್ಕೆ ಪರೀಕ್ಷಾ ವೀಕ್ಷಕರನ್ನು, ಕ್ಷೇತ್ರ ತನಿಖಾಧಿಕಾರಿಯನ್ನು ಮತ್ತು ಶಾಲಾ ಸಿಬ್ಬಂದಿಗಳನ್ನು ಶ್ಲಾಘಸಿದರು.