ಶಿರಸಿ: ಫ್ರೀಲೆನ್ಸರ್ ಫೋಟೋಗ್ರಾಫರ್ಗಳಿಗೆ ಡಿಸೆಂಬರ್-2024ರ ಅಂತ್ಯದೊಳಗೆ ಶಿರಸಿ ಫೋಟೋಗ್ರಾಫರ್ ವಿಡಿಯೋಗ್ರಾಫರ್ ಸಂಘಕ್ಕೆ ಸೇರಿಕೊಳ್ಳಲು ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇತ್ತೀಚೆಗೆ ನಡೆದ ಸರ್ವಸಧಾರಣಸಭೆಯಲ್ಲಿ ಸದಸ್ಯರ ಚರ್ಚೆಯ ನಂತರ ಈಗಾಗಲೇ ಶಿರಸಿ ನಗರದಲ್ಲಿ ಫೋಟೋ ಹಾಗೂ ವಿಡಿಯೋ ಮಾಡುತ್ತಿರುವ ಹೊಸ ಫ್ರೀಲೆನ್ಸರ್ ಫೋಟೋಗ್ರಾಫರ್ಗಳಿಗೆ ಶಿರಸಿ ಫೋಟೋಗ್ರಾಫರ್ ವಿಡಿಯೋಗ್ರಾಫರ್ ಸಂಘಕ್ಕೆ ಸೇರಿಕೊಳ್ಳಲು ಡಿಸೆಂಬರ್ ತಿಂಗಳು ಕೊನೆಯದಾಗಿರುತ್ತದೆ. ಫೋಟೋಗ್ರಾಫಿ ವೃತ್ತಿಯನ್ನು ಆಯ್ದುಕೊಂಡ ಹೊಸ ಫೋಟೋಗ್ರಾಫರ್ಗಳಿಗೆ ಸಂಘಕ್ಕೆ ಸೇರಲು ಅವಕಾಶ ನೀಡಿದೆ. ಡಿಸೆಂಬರ್ 31 ಕೊನೆಯ ದಿನಾಂಕ ಆಗಿರುತ್ತದೆ. ಆದ್ದರಿಂದ ಸಂಘಕ್ಕೆ ಸೇರ್ಪಡೆಯಾಗಿ ಸಂಘದ ಘನತೆಯನ್ನು ಹೆಚ್ಚಿಸಬೇಕಾಗಿ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಹಾಗೂ ಖಜಾಂಚಿ ಸರ್ವ ಸದಸ್ಯರು ಹೊಸ ಫೋಟೋಗ್ರಾಫರ್ಗಳಿಗೆ ಸ್ವಾಗತ ಕೋರಿದ್ದಾರೆ.