ಶಿರಸಿ: ಅಂಬಾಗಿರಿಯ ಕಾಳಿಕಾಭವಾನಿ ದೇವಸ್ಥಾನದ 34 ನೇ ವಾರ್ಷಿಕ ಉತ್ಸವವು ಡಿಸೆಂಬರ್ 13 ಹಾಗೂ 14 ರಂದು ನಡೆಯಲಿದೆ.
ಈ ಕುರಿತು ಪ್ರಕಟಣೆಯನ್ನು ನೀಡಿರುವ ದೇವಸ್ಥಾನದ ನಿರ್ವಹಣಾ ಸಮೀತಿಯ ಅದ್ಯಕ್ಷ ವಿ.ಎಮ್.ಹೆಗಡೆ ಆಲ್ಮನೆ ಡಿ.13 ಶುಕ್ರವಾರದಂದು ಧ್ವಜಾರೋಹಣ, ಮಹಿಳೆಯರಿಂದ ಕುಂಕುಮಾರ್ಚನೆ, ಹಾಗೂ ಸಂಜೆ ಕರ್ಮಾಂಗ ಪ್ರಾರಂಭ,ಕಲಶ ಸ್ಥಾಪನೆ,ಬಲಿ. ಅಷ್ಟಾವಧಾನ ಸೇವೆ ಮುಂತಾದ ಧಾರ್ಮಿಕ ಕಾರ್ಯ ಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ಡಿ.14 ಶನಿವಾರದಂದು ನವಕುಂಡದಲ್ಲಿ ಅಧಿವಾಸ ಹೋಮ, 108 ಕಲಶಾಭಿಶೇಕ, ಕಲಾವೃ್ದ್ದಿ ಹೋಮ, ಶತಚಂಡಿ ಹವನ ಹಾಗೂ ಪೂರ್ಣಾಹುತಿ ಮುಂತಾದವುಗಳು ವೇ.ಮೂ. ಕಟ್ಟೆ ಶಂಕರ ಭಟ್ಟ ಅವರ ಪ್ರಧಾನಾಚಾರ್ಯತ್ವದಲ್ಲಿ ನಡೆಯಲಿದೆ.
ಅಪರಾಹ್ನ 1 ಘಂಟೆಗೆ ಮಹಾ ಮಂಗಳಾರತಿ, ತೀರ್ಥಪ್ರಸಾದ ಹಾಗೂ ಫಲಮಂತ್ರಾಕ್ಷತೆ ಆಶೀರ್ವಚನ, ಪ್ರಸಾದ ವಿತರಣೆ ನಡೆಯಲಿದೆ. ಭಕ್ತರು ತನು-ಮನು ದಿಂದ ಧನ-ಧಾನ್ಯ ಗಳ ಸೇವೆ ಸಲ್ಲಿಸಿ ಶ್ರೀ ದೇವಿಯ ಕೃಪೆಗೆ ಒಳಗಾಗಲು ಸದಾವಕಾಶ ಇದಾಗಿದೆ ಎಂದು ತಿಳಿಸಲಾಗಿದೆ.