ಶಿರಸಿ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ವೈದ್ಯಕೀಯ ಪ್ರತಿನಿಧಿಗಳ ಸಂಘವು ಡಿ. 7 ಮತ್ತು 8ರಂದು ಶಿರಸಿಯ ಪ್ರೋಗ್ರೆಸ್ಸಿವ ಗ್ರೌಂಡ್ ನಲ್ಲಿ ವೈದ್ಯಕೀಯ ಪ್ರತಿನಿಧಿಗಳಿಗಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಸಂಘ ಆಯೋಜಿಸಿತ್ತು.
ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆಯನ್ನು ನಗರ ಸಭೆಯ ಅಧ್ಯಕ್ಷರಾದ ಶ್ರೀಮತಿ ಶರ್ಮಿಳಾ ಮಾದನಗೇರಿ ನೆರವೇರಿಸಿದರು. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕುಮಾರ್ ಬೋರಕರ್ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸಂತೋಷ ನಾಯ್ಕ್ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅಥಿಗಳಾಗಿ ಶ್ರೀಧರ್ ಹೆಗಡೆ, ಗಣೇಶ ಹೆಗಡೆ, ಹಸ್ತಿಮಾಲ್ ಚೌಧರಿ, ಚಂದ್ರಶೇಖರ ಹೆಗಡೆ, ವಿಲ್ಸನ್ ಡಿಸೋಜ, ರಾಜೇಂದ್ರ ಹೆಗಡೆ ಹಾಗೂ ಸಂಘದ ಪ್ರಮುಖರಾದ ಪ್ರಶಾಂತ್ ನಾಯ್ಕ್, ಸದಾನಂದ ನಾಯ್ಕ್, ಹೇಮಂತ್ ಮಡಿವಾಳ, ವಿವೇಕ್ ಪೂಜಾರಿ, ನುಮಾನ್ ಖಾತಿಬ್, ವಿ ಎಸ್ ಹೆಗಡೆ, ಚಂದ್ರಶೇಖರ್ ಮಾದನಗೆರಿ ಮತ್ತು ಸಂಘದ ವಿವಿಧ ಸ್ಥರದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕ್ರಿಕೆಟ್ ಟೂರ್ನಮೆಂಟ್ ನ್ನು ರೋಷನ್ ಅಮೀನ್ ನೇತೃತ್ವದ ತಂಡವು ವಿಜಯಿಶಾಲಿಯಾಯಿತು. ಸದಾನಂದ ನಾಯ್ಕ್ ನೇತೃತ್ವದ ತಂಡವು ರನ್ನರ್ ಅಪ್ ಆಗಿ ಹೊರಹೊಮ್ಮಿತು.