Slide
Slide
Slide
previous arrow
next arrow

ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್: ದಾಂಡೇಲಿ ವಿದ್ಯಾರ್ಥಿಗಳ ಸಾಧನೆ

300x250 AD

ದಾಂಡೇಲಿ : ಉತ್ತರ ಕನ್ನಡ ಜಿಲ್ಲಾ ಕರಾಟೆ ಶಿಕ್ಷಕರ ಮತ್ತು ಕ್ರೀಡಾ ಸಂಘ ಇದರ ಆಶ್ರಯದಲ್ಲಿ ಕರಾಟೆ-ಡು ಕೆನ್ರಿಯಾಕನ್ ಶೋಟೋಕನ್ ಶೈಲಿಯ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ದಾಂಡೇಲಿಯ ದಾಂಡೇಲಿ ಕರಾಟೆ ಕ್ಲಬ್ ಹಾಗೂ ದಾಂಡೇಲಿ ಕರಾಟೆ ಕ್ಲಾಸಸ್ ಇಲ್ಲಿನ 16 ಕರಾಟೆ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನವನ್ನು ನೀಡಿ, ವಿವಿಧ ವಿಭಾಗಗಳಲ್ಲಿ ಬಹುಮಾನವನ್ನು ಗಿಟ್ಟಿಸಿ ನಗರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಕಾರವಾರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ದಾಂಡೇಲಿ ಕರಾಟೆ ಕ್ಲಬ್ ಹಾಗೂ ದಾಂಡೇಲಿ ಕರಾಟೆ ಕ್ಲಾಸಸ್ ವಿದ್ಯಾರ್ಥಿಗಳಾದ ಓಮ್, ಪ್ರೀತಮ್, ಆರಾಧ್ಯ, ಶ್ವೇತಾ, ಪ್ರಾಂಜಲ, ಅಮೃತಾ, ಜೈನಬ್, ವಿರಾಜ್, ನಿಖಿಲ್, ಮನಸ್, ವಂಶ್, ಅಬ್ದುಲ್ ಆಹಾದ್, ಮಹಮ್ಮದ್ ಅತೀಫ್, ಪ್ರಣವ್, ಆದಿತ್ಯ, ಮೊಹ್ಸಿನ್ ಇವರು ಭಾಗವಹಿಸಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಬಹುಮಾನ ವಿಜೇತರಾಗಿದ್ದಾರೆ.

300x250 AD

ಈ ವಿದ್ಯಾರ್ಥಿಗಳಿಗೆ ಕರಾಟೆ ಮುಖ್ಯ ಶಿಕ್ಷಕರಾದ ಯಾಕುಬ್ ಶೇಖ ಮತ್ತು ರಿಯಾಜ್ ಬೀಡಿಕರ್ ಅವರು ತರಬೇತುದಾರರಾಗಿರುತ್ತಾರೆ. ಕರಾಟೆ ವಿದ್ಯಾರ್ಥಿಗಳ ಈ ಸಾಧನೆಗೆ ಮತ್ತು ಈ ಸಾಧನೆಗೆ ಕಾರಣರಾದ ಕರಾಟೆ ಶಿಕ್ಷಕರಿಗೆ ನಗರದ ಗಣ್ಯರನೇಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Share This
300x250 AD
300x250 AD
300x250 AD
Back to top