Slide
Slide
Slide
previous arrow
next arrow

ಡಿ.8ರಿಂದ ಶ್ರೀ ಶ್ರೀಧರ ಸ್ವಾಮಿಗಳ ಜಯಂತಿ ಮಹೋತ್ಸವ

300x250 AD

ಶಿರಸಿ:  ಶ್ರೀ ಶ್ರೀಧರ ಸ್ವಾಮಿಗಳ 116 ನೇ ಜಯಂತಿ ಮಹೋತ್ಸವವು ಹಾಗೂ ಶ್ರೀ ದತ್ತ ಜಯಂತಿ  ಕಾರ್ಯಕ್ರಮವು ಡಿಸೆಂಬರ್ 8,ಭಾನುವಾರದಿಂದ ಡಿ. 15, ಭಾನುವಾರದವರೆಗೆ ಸಾಗರ ಸಮೀಪದ ವರದಪುರದ ಶ್ರೀಧರಾಶ್ರಮ- ಶ್ರೀಕ್ಷೇತ್ರದಲ್ಲಿ ನಡೆಯಲಿದೆ ಎಂದು ಶ್ರೀಧರ ಸೇವಾ ಮಹಾಮಂಡಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಡಿ.8ರಂದು ಶ್ರೀ ಗುರುಗಣಪತಿ ಪೂಜನ, ಪುಣ್ಯಹವನ, ಶ್ರೀ ಗಣಪತಿ ಉಪನಿಷತ್ ಹವನ ಹಾಗೂ ಇತರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಹೋತ್ಸವವು ಪ್ರಾರಂಭಗೊಳ್ಳಲಿದೆ. ನಂತರದ ದಿನಗಳಲ್ಲಿ ಶ್ರೀ ಅತಿವಿಷ್ಣು ಮಹಾಯಾಗ, ಗೋಸೂಕ್ತಹವನ ನಡೆಯಲಿದೆ. ಡಿ.11ರಂದು ಗೀತಾ ಜಯಂತಿ ನಿಮಿತ್ತ ಸಾಮೂಹಿಕ ಭಗವದ್ಗೀತಾ ಪಠಣ,  ಅಪರಾಹ್ನ 3ರಿಂದ  ಪ್ರವಚನಗಳು ಸಭಾಕಾರ್ಯಕ್ರಮದಲ್ಲಿ ನಡೆಯಲಿವೆ.

ಡಿ.12ರಂದು ಅನ್ನಹವನ, ಪಾಲಕಿ ಉತ್ಸವ, ಅಷ್ಟಾವಧಾನ ಸೇವೆ ನಡೆಯಲಿವೆ. ಡಿ.13ರಂದು ದಕ್ಷಿಣಾಮೂರ್ತಿ ಹವನ, ಪಾಲಕಿ ಉತ್ಸವ, ಅಷ್ಟಾವಧಾನ ಸೇವೆ ನಡೆಯಲಿದೆ. ಡಿ.14ರಂದು ದತ್ತಮಂತ್ರ, ಗುರುಮಂತ್ರಗಳಿಂದ ಹವನ,  ಶ್ರೀಧರ ಸ್ವಾಮಿಗಳ  ಸಮಾಧಿಗೆ ಶತರುದ್ರಾಭಿಷೇಕ, ಸಹಸ್ರ ತುಳಸಿ ಅರ್ಚನಾ ಪೂರ್ವಕ  ಕಲ್ಪೋಕ್ತಿ ಮಹಾಪೂಜೆ ,  ಶ್ರೀಧರ ಸ್ವಾಮಿಗಳ ಜನ್ಮೋತ್ಸವ,  ಪಾಲಕಿ ಉತ್ಸವ,ಅಷ್ಟಾವಧಾನ ಸೇವೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಡಿ.15ರಂದು ದತ್ತಮಂತ್ರ, ಗುರು ಮಂತ್ರ ಗಳ ಹವನದ ಪೂರ್ಣಹುತಿ ಮಂತ್ರಾಕ್ಷತೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.  

300x250 AD

ನಿತ್ಯದ ಕಾರ್ಯಕ್ರಮಗಳಲ್ಲಿ  ಸದ್ಗುರು ಸಮಾಧಿಗೆ ಫಲ-ಪಂಚಾಮೃತ ಸಹಿತ ಏಕಾದಶ ರುದ್ರ, ಪುರುಷಸೂಕ್ತ ಅಭಿಷೇಕ ಸಹಿತ ಕಲ್ಪೋಕ್ತ ಮಹಾಪೂಜೆ, ವೇದ- ಉಪನಿಷತ್, ಶ್ರೀ ಗುರುಚರಿತ್ರೆ, ಶ್ರೀ ಗುರುಗೀತಾ, ಭಗವದ್ಗೀತಾ, ಶ್ರೀ ದತ್ತಪ್ರವರಾಜ ಗುರುಮಂತ್ರ, ದತ್ತಮಂತ್ರಗಳ ಜಪಾನುಷ್ಟಾನ, ಪುರಾಣ ಪ್ರವಚನ, ಭಜನೆ, ಕೀರ್ತನೆ ಇತ್ಯಾದಿಗಳು ನಿತ್ಯ ಕಾರ್ಯಕ್ರಮಗಳು ನಡೆಯುತ್ತವೆ ಎಂದು ತಿಳಿಸಲಾಗಿದೆ.

ಶ್ರೀ ಶ್ರೀಧರ ಸ್ವಾಮಿಗಳ ಜನ್ಮೋತ್ಸವವು ಗುರುಗಳ ಪಾದುಕಾ ಮಂದಿರ, ವಸಂತಪುರ, ಬೆಂಗಳೂರು, ಶ್ರೀ ಗಳ ಜನ್ಮಸ್ಥಳ ಲಾಡಚಿಂಚೋಳಿ, ಮಾಗಡಿ ತಾಲೂಕಿನ ಮರಲಗೊಂಡಲ ಗ್ರಾಮದ ಶ್ರೀ ದತ್ತಾತ್ರಯ ದೇವಸ್ಥಾನ, ಶ್ರೀ ಧರಾಶ್ರಮ ಪುಣೆ, ಶ್ರೀ ಧರ ಸ್ಪೂರ್ತಿ ನಿವಾಸ ವಾರಣಾಸಿ ಗಳಲ್ಲಿ ಶ್ರೀದತ್ತ, ಶ್ರೀಧರ ಜಯಂತಿ ಉತ್ಸವ ಕಾರ್ಯಕ್ರಮಗಳು ನಡೆಯಲಿವೆ.

ಗುರು ಭಕ್ತರು ಮಹೋತ್ಸವಕ್ಕೆ ಆಗಮಿಸಿ ತನು, ಮನ , ಧನ, ಧಾನ್ಯ ಗಳಿಂದ ಒಡಗೂಡಿ ಆಗಮಿಸಿ ಸಕ್ರೀಯವಾಗಿ ಪಾಲ್ಗೊಂಡು , ಆಶ್ರಮದ ನೀತಿ ನಿಯಮಗಳನ್ನು ಪಾಲಿಸಿ  ಜಯಂತಿ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕೆಂದು‌ ಕೋರಲಾಗಿದೆ.

Share This
300x250 AD
300x250 AD
300x250 AD
Back to top