Slide
Slide
Slide
previous arrow
next arrow

ತಾಲೂಕಿನ ನೌಕರರು ಜನರ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ: ಭೀಮಣ್ಣ ನಾಯ್ಕ

300x250 AD

ಸಿದ್ದಾಪುರ: ಸಿದ್ದಾಪುತ ತಾಲೂಕಾ ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಶಾಸಕ ಭೀಮಣ್ಣ ಟಿ. ನಾಯಕ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಮ್ಮ ತಾಲೂಕಿನ ಎಲ್ಲಾ ನೌಕರರು ಸರ್ಕಾರದ ಯೋಜನೆಗಳನ್ನು ಗ್ಯಾರಂಟಿ ಸ್ಕೀಮ್‌ಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದ್ದಾರೆ. ಎಲ್ಲಾ ನೌಕರರಿಗೂ ಉತ್ತಮವಾದ ಸಹಕಾರ ನೀಡಲು ನಾನು ಬದ್ಧನಿದ್ದೇನೆ. ತಾಲೂಕ ನೌಕರರ ಸಂಘವು ಎಲ್ಲಾ ನೌಕರರು ಇನ್ನು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುವಂತೆ ಮನವರಿಕೆ ಮಾಡಿ ಪ್ರೋತ್ಸಾಹಿಸಬೇಕಾಗಿ ಕೇಳಿಕೊಳ್ಳುತ್ತೇನೆ ಎಂದರು.

2924-29ರ ಅವಧಿಯ ಅಧ್ಯಕ್ಷರು ಎಲ್ಲಾ ಪದಾಧಿಕಾರಿಗಳಿಗೆ ನಾನು ಶುಭ ಕೋರುತ್ತೇನೆ ಹಾಗೆಯೇ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ತಮ್ಮ ಕಟ್ಟಡದ ನವೀಕರಣಕ್ಕೆ 5 ಲಕ್ಷ ನೀಡುತ್ತೇನೆಂದು ಭರವಸೆ ನೀಡಿ, ನೌಕರರ ಕೆಲಸದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

300x250 AD

ಅಧ್ಯಕ್ಷತೆಯನ್ನು ನೌಕರ ಸಂಘದ ಅಧ್ಯಕ್ಷ ರಾಜೇಶ್ ನಾಯ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಹಶೀಲ್ದಾರರಾದ ಎಂ ಆರ್ ಕುಲಕರ್ಣಿ, ದೇವರಾಜ ಹಿತ್ತಲಕೊಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಹೆಚ್. ನಾಯ್ಕ , ಚುನಾವಣಾ ಅಧಿಕಾರಿಗಳಾದ ಎಂ. ಎಸ್. ಭಟ್ ಹಾಗೂ ಎಲ್ಲ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನೌಕರ ಸಂಘದ ಹಿರಿಯ ಉಪಾಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸತೀಶ ಹೆಗಡೆ ಸ್ವಾಗತಿಸಿದರು ಉಷಾ ನಾಯ್ಕ, ರಾಮನಾಥ್ ನಾಯ್ಕ, ಹರೀಶ್ ನಾಯಕ್ ಜಿಎ, ನಾಗರಾಜ್ ಮಡಿವಾಳ್ ನಿರೂಪಿಸಿದರು.

Share This
300x250 AD
300x250 AD
300x250 AD
Back to top