ಶಿರಸಿ: ವಿಶ್ವ ಏಡ್ಸ್ ನಿರ್ಮೂಲನಾ ದಿನದ ನಿಮಿತ್ತ ಕ್ಯಾಂಡಲ್ ಜಾಥಾ ಕಾರ್ಯಕ್ರಮವನ್ನು ಶಿರಸಿಯ ಅರಣ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು.
ಜಾಥಾ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್, ಅರಣ್ಯ ಮಹಾವಿದ್ಯಾಲಯದ ವಿದ್ಯಾಧಿಕಾರಿ ಡಾ.ವಾಸುದೇವ, ಸಿಬ್ಬಂದಿಗಳಾದ ಡಾ. ರಮೇಶ್ ರಾಠೋಡ್, ಡಾ. ರಾಘವೇಂದ್ರ, ಡಾ.ಯಶಸ್ವಿನಿ ಶರ್ಮಾ, ಇಕೋಕೇರ್ ಸಂಸ್ಥೆಯ ಅಧ್ಯಕ್ಷ ಸುನೀಲ್ ಭೋವಿ, ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ, ಜಿಲ್ಲಾ ಶಾಖೆ: ಉ.ಕ.ದ ಅಧ್ಯಕ್ಷ ಮಹೇಶ ಡಿ ನಾಯಕ್, ಶ್ರೀಮತಿ ಗಿರಿಜಾ ಹೆಗಡೆ, ಶ್ರೀಮತಿ ಕವಿತಾ ಸಿ ಕೆ. ಪಂಡಿತ್ ಸಾರ್ವಜನಿಕ ಆಸ್ಪತ್ರೆ, ಮತ್ತು ವಿದ್ಯಾರ್ಥಿಗಳ ಸಹಯೋಗದೊಂದಿಗೆ ನೆರವೇರಿತು.