ಶಿರಸಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ, ಪಂಡಿತ್ ಸಾರ್ವಜನಿಕ ಆಸ್ಪತ್ರೆ, ಶಿರಸಿ, ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ, ಜಿಲ್ಲಾ ಶಾಖೆ: ಉತ್ತರ ಕನ್ನಡ, ಎಮ್ಇಎಸ್ ನರ್ಸಿಂಗ್ ಕಾಲೇಜ್, ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯ, ಶಿರಸಿ ಹಾಗೂ ಇಕೋ ಕೇರ್ ಸಂಸ್ಥೆ, ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಏಡ್ಸ್ ನಿರ್ಮೂಲನಾ ದಿನವನ್ನು ಆಚರಿಸಲಾಯಿತು.
ಬೆಳಗ್ಗೆ 9.30 ಕ್ಕೆ ಎಂಇಎಸ್ ನರ್ಸಿಂಗ್ ಕಾಲೇಜಿನಿಂದ ಲಯನ್ಸ್ ಸರ್ಕಲ್ ವರೆಗೆ ಜಾಥಾ ಕಾರ್ಯಕ್ರಮವನ್ನು ಏರ್ಪಡಿಸಿ ಜನರಲ್ಲಿ ಏಡ್ಸ್ ಕುರಿತು ಜಾಗೃತಿ ಮೂಡಿಸಲಾಯಿತು. ವೈಸ್ ಚಾನ್ಸಲರ್ ಡಿ. ಎಂ. ಪಾಟೀಲ್, ತಾಲೂಕಾ ಆರೋಗ್ಯಾಧಿಕಾರಿ ಡಾ. ವಿನಾಯಕ್ ಭಟ್, ಜಿ. ಎಂ. ಹೆಗಡೆ ಮುಳಖಂಡ, ಜಿ.ಟಿ.ಭಟ್ ಜಾಥಾಗೆ ಹಸಿರು ನಿಶಾನೆಯೊಂದಿಗೆ ಚಾಲನೆ ನೀಡಿದರು. ಬೇಬಿ ನಾಯ್ಕ್, ಗಿರಿಜಾ ಹೆಗಡೆ, ಮಹೇಶ ಡಿ. ನಾಯಕ್, ಇಕೋ ಕೇರ್ ಅಧ್ಯಕ್ಷ ಸುನೀಲ್ ಭೋವಿ, ಜಗದೀಶ್ ನಾಯ್ಕ್, ರಾಜೇಶ್ ವೆರ್ಣೇಕರ್ ಉಪಸ್ಥಿತರಿದ್ದರು.
ನಂತರ 10.30 ಕ್ಕೆ ಕಾಲೇಜಿನ ಸಭಾಭವನದಲ್ಲಿ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಏಡ್ಸ್ ದಿನಾಚರಣೆಯ ನಿಮಿತ್ತ ಎಂ ಇ ಎಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಚಿತ್ರಕಲೆ /ಪ್ರಭಂದ ಸ್ಪರ್ಧೆ /ಘೋಷ ವಾಕ್ಯಗಳ ಬರವಣಿಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಜಿ.ಟಿ. ಭಟ್, ಗಣೇಶ. ಎಸ್. ಹೆಗಡೆ, ಮಹೇಶ ಗಾಳಿಮನೆ ಇವರು ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿ ಕೊಟ್ಟರು. ಪ್ರಭಂದ ಸ್ಪರ್ಧೆಯಲ್ಲಿ 1.ಮುಸ್ಕಾನ್ 2 ಪಲ್ಲವಿ., ಚಿತ್ರಕಲೆ ಸ್ಪರ್ಧೆಯಲ್ಲಿ 1.ಮಾನ್ಯ 2.ಅಕ್ಷತಾ., ಘೋಷವಾಕ್ಯದಲ್ಲಿ 1.ಅಕ್ಷತಾ 2.ಅನುಶ್ರೀ 3.ಬಿಬಿ ಸಾನಿಯಾ. ಹಂಚಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಗಿರಿಜಾ ಹೆಗಡೆ, ಬೇಬಿ ನಾಯ್ಕ್, ಇಕೋ ಕೇರ್ ಅಧ್ಯಕ್ಷ ಸುನೀಲ್ ಭೋವಿ, ಪೊಲೀಸ್ ಇಲಾಖೆ ವತಿಯಿಂದ ರವೀಂದ್ರ ನಾಯ್ಕ್ ಉಪಸ್ಥಿತರಿದ್ದರು.