ಶಿರಸಿ: ಇಲ್ಲಿನ ಲಯನ್ಸ ಶಾಲೆಯಲ್ಲಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹರ್ಷಿತ್ ನಾಗರಾಜ ಜೋಗಳೇಕರ್, ಡಿ.10 ರಿಂದ 14ರವರೆಗೆ ನಡೆಯುವ 68ನೇ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾನೆ. ಸಾಧನೆ ತೋರಿದ ವಿದ್ಯಾರ್ಥಿಗೆ, ಅವರ ಪಾಲಕರಿಗೆ ಹಾಗೂ ತರಬೇತುದಾರರಿಗೆ ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿ ಆಡಳಿತ ಮಂಡಳಿ, ಶಿರಸಿ ಲಯನ್ಸ ಕ್ಲಬ್ ಬಳಗ, ಶಿರಸಿ ಲಯನ್ಸ ಶಾಲಾ ಹಾಗೂ ಕಾಲೇಜು ಸಮೂಹದ ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ವೃಂದ, ಪಾಲಕ ಬಳಗ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದೆ ಶುಭಹಾರೈಸಿದೆ.