Slide
Slide
Slide
previous arrow
next arrow

ಡಿ.27 ರಿಂದ ಮೂರು ದಿನ ‘ವಿಶ್ವ ಹವ್ಯಕ ಸಮ್ಮೇಳನ’

300x250 AD

ವಿವಿಧ ರಂಗದಲ್ಲಿ ಸಾಧನೆಗೈದ 567 ಸಾಧಕರಿಗೆ ಸನ್ಮಾನ | ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮ್ಮೇಳನ

ಶಿರಸಿ: ಡಿ.27,ರಿಂದ 29ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಹಾಗೂ ಖ್ಯಾತ ವೈದ್ಯ ಡಾ. ಗಿರಿಧರ್ ಕಜೆ ಹೇಳಿದರು.

ನಗರದ ಯೋಗ ಮಂದಿರದಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಕ್ಕಿಂತ 4ವರ್ಷ ಮೊದಲೇ ನಮ್ಮ ಸಂಸ್ಥೆ ಹುಟ್ಟಿಕೊಂಡಿದೆ. ಹವ್ಯಕ ಮಹಾಸಮ್ಮೇಳನ. ಎಲ್ಲರನ್ನೂ ಸೇರಿಸಿಕೊಂಡು ಮಾಡುತ್ತಿರುವ ಸಮ್ಮೇಳನವಾಗಿದೆ. ಹವ್ಯಕರೆಲ್ಲರೂ ಬರಬೇಕು, ಹವ್ಯಕೇತರರೂ ಬಂದೂ ಆತ್ಮೀಯವಾಗಿ ಭಾಗವಹಿಸಬೇಕು ಎಂಬುದು ನಮ್ಮ ಆಶಯವಾಗಿದೆ. ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ನಾಡಿನ ಗಣ್ಯರು ಉದ್ಘಾಟಿಸಲಿದ್ದಾರೆ ಎಂದರು.

81ಶ್ರೇಷ್ಠ ಸಾಧಕರಿಗೆ ಹವ್ಯಕ ಸಾಧಕ ರತ್ನ ಪ್ರಶಸ್ತಿ, 81ವೈದಿಕರಿಗೆ ಹವ್ಯಕ ವೇದರತ್ನ ಪ್ರಶಸ್ತಿ,81ಕೃಷಕರಿಗೆ ಹವ್ಯಕ ಕೃಷಿ ರತ್ನ ಪ್ರಶಸ್ತಿ,81ಶಿಕ್ಷಕರಿಗೆ ಹವ್ಯಕ ಶಿಕ್ಷಕ ರತ್ನ ಪ್ರಶಸ್ತಿ, 81ವಿದ್ಯಾರ್ಥಿಗಳಿಗೆ ಹವ್ಯಕ ವಿದ್ಯಾರತ್ನ ಪ್ರಶಸ್ತಿ,81ಯೋಧರಿಗೆ ಹವ್ಯಕ ದೇಶರತ್ನ ಪ್ರಶಸ್ತಿ, 81ಸಾಧಕರಿಗೆ ಹವ್ಯಕ ಸ್ಪೂರ್ತಿ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.

300x250 AD

81ಕಲಾವಿದರ ತಂಡದಿಂದ ನರ್ತನ ಸಂಕೀರ್ತನ , ಹವಿಗನ್ನಡದ ಅಮೋಘ ಸಾಹಿತ್ಯ ಪ್ರದರ್ಶನ, ಸಾವಿರದ ರಕ್ತದಾನ ಮಹಾಸಮ್ಮೇಳನದ ಮಹಾದಾನ, 81 ವಾಣಿಜ್ಯಗಳು, 81 ದೇಶಿ ಕರಕುಶಲ ಮಳಿಗೆಗಳು ,ಇಕ್ಷು ರಸಾಸ್ವಾದ ಸಿಹಿಸವಿಯ ಕಬ್ಬಿನ ಆಲೆಮನೆ ಆಯೋಜಿಸಲಾಗಿದೆ ಎಂದರು.

ಖ್ಯಾತ ಕಲಾವಿದರಿಂದ ಶಾಸ್ತ್ರೀಯ ಸಂಗೀತ ಸಂಗಮ, ಯಕ್ಷಯಾನ ವೈಭವ, ಭಾವರಾಗ ಸುಗುಮ ಗಾನಾಮೃತ, ವೈವಿಧ್ಯಮಯ ನಾಟ್ಯೋತ್ಸವ, ವಾದ್ಯ ವೈಭವ, ಭಕ್ತಿ ಭಜನೆ, ಸಾಮೂಹಿಕ ಭಗವದ್ಗೀತಾ ಪಠಣ, ಹವ್ಯಕ ನಾಟಕ ಪ್ರದರ್ಶನ ಸೇರಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ರಾಮಚಂದ್ರಾಪುರ ಮಠ, ಸ್ವರ್ಣವಲ್ಲೀ , ನೆಲೆಮಾಂವು ಮಠ, ಮಂತ್ರಾಲಯದ ಶ್ರೀಗಳು, ಪೇಜಾವರ ಶ್ರೀಗಳು ಸೇರಿ ಹಲವು ಸ್ವಾಮಿಜಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಶಾಂಕ್ ಹೆಗಡೆ, ಆರ್ ಎಂ ಹೆಗಡೆ, ವೇಣು ವಿಘ್ನೇಶ್, ಪ್ರಶಾಂತ ಭಟ್ ಸೇರಿ ಹಲವರು ಇದ್ದರು.

Share This
300x250 AD
300x250 AD
300x250 AD
Back to top