Slide
Slide
Slide
previous arrow
next arrow

ಜನಮನ ಗೆದ್ದ ಸಪ್ತಕದ ಸ್ವರಾನುಭೂತಿ ಸಂಗೀತ

300x250 AD

ಶಿರಸಿ : ನಗರದ ರಂಗಧಾಮದಲ್ಲಿ ಬೆಂಗಳೂರಿನ ಸಪ್ತಕದ ಆಯೋಜನೆಯಲ್ಲಿ ಸಂಘಟಿತವಾಗಿದ್ದ ಸ್ವರಾನುಭೂತಿ ಸಂಗೀತ ಕಾರ್ಯಕ್ರಮ ಸಂಗೀತಾಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.

ಯಾವುದೇ ಉದ್ಘಾಟನಾ ಭಾಷಣಗಳಿಲ್ಲದೆ ನೇರವಾಗಿ ವಾದನ ಗಾಯನಗಳು ನಡೆದು ಸಂಗೀತ ರಸದೂಟ ನೀಡುವಲ್ಲಿ ಕಲಾವಿದರು ಯಶಗೊಂಡಿದ್ದಾರೆ. ಆರಂಭಿಕವಾಗಿ ನಡೆದ ಸಿತಾರ್ ವಾದನ ಕಾರ್ಯಕ್ರಮದಲ್ಲಿ ಖ್ಯಾತ ಸಿತಾರ್ ವಾದಕ ಕೊಲ್ಕತ್ತಾ ಅಯಾನ ಸೆನ್ ಗುಪ್ತ ತಮ್ಮ ಸಿತಾರ್ ಸೋಲೋ ನಡೆಸಿಕೊಡುತ್ತಾ ರಾಜ್ ಯಮನದಲ್ಲಿ ವಿಸ್ತಾರವಾಗಿ ವಿಲಂಬಿತ್ ಮಧ್ಯಲಯ ಹಾಗೂ ತೀನ್ ತಾಲ್ ದೃತ್ ನುಡಿಸಿದರು. ಈ ಸಂದರ್ಭದಲ್ಲಿ ತಬಲಾದಲ್ಲಿ ಗೋವಾದ ಮಯಾಂಕ ಬೇಟೆಕರ್ ಸಮರ್ಥವಾಗಿ ಸಾತ್ ನೀಡಿದರು.

300x250 AD

ನಂತರದಲ್ಲಿ ಆರಂಭಗೊಂಡ ಗಾಯನದಲ್ಲಿ ಖ್ಯಾತ ಗಾಯಕಿ ಮಂಜರಿ ಅಸ್ನಾರೆ ಕೇಳ್ಕರ್ ನಾಸಿಕ್ ತಮ್ಮ ಸಂಗೀತ ಕಚೇರಿ ನಡೆಸಿಕೊಡುತ್ತಾ, ರಾಗ್ ಶುದ್ಧ ಕಲ್ಯಾಣ ಪ್ರಸ್ತುತಗೊಳಿಸಿದರು. ಸರಿಸುಮಾರು ಒಂದುವರೆ ಗಂಟೆಗಳ ಕಾಲ ಸಂಗೀತ ಪ್ರಸ್ತುತಗೊಳಿಸಿ ಕೊನೆಯಲ್ಲಿ ಅಭಂಗವನ್ನು ಸುಂದರವಾಗಿ ಹಾಡಿ ಕಾರ್ಯಕ್ರಮ ಸಮಾಪ್ತಿಗೊಳಿಸಿದರು.
ಕೇಳ್ಕರ್ ಅವರ ಗಾನಸುಧೆಗೆ ತಬಲಾದಲ್ಲಿ ಪಂಡಿತ್ ರವೀಂದ್ರ ಯಾವಗಲ್ ಬೆಂಗಳೂರು ಹಾಗೂ ಹಾರ್ಮೋನಿಯಂನಲ್ಲಿ ಗುರುಪ್ರಸಾದ್ ಹೆಗಡೆ ಗಿಳಿಗುಂಡಿ ತಾಳದಲ್ಲಿ ಅನಂತಮೂರ್ತಿ ಸಾತ್ ನೀಡಿದರು. ಸಪ್ತಕದ ಜಿ.ಎಸ್.ಹೆಗಡೆ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿ ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು.

Share This
300x250 AD
300x250 AD
300x250 AD
Back to top