Slide
Slide
Slide
previous arrow
next arrow

ನಂದಿಗದ್ದೆಯಲ್ಲಿ ಗ್ರಾಮ ಆರೋಗ್ಯ ತರಬೇತಿ ಯಶಸ್ವಿ

300x250 AD

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತದ ಸಭಾಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆ ಇವುಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮ ಯಶಸ್ವಿ ಸಂಪನ್ನಗೊಂಡಿತು.

ಸಭೆಯ ಆರಂಭದಲ್ಲಿ ಗ್ರಾಮ ಪಂಚಾಯತ ಕಾರ್ಯದರ್ಶಿಯಾದ ಗಜಾನನ ಸಾವರ್ಕರ್ ಎಲ್ಲರನ್ನು ಸ್ವಾಗತಿಸಿದರು. ಸಭೆಯ ನೋಡಲ್ ಅಧಿಕಾರಿಗಳಾದ ನಬಿಲಾಲ ಇನಾಮದಾರ ತಾಲೂಕ ಯೋಜನಾಧಿಕಾರಿ ತಾಲೂಕ ಪಂಚಾಯತ ಜೋಯಿಡಾರವರು ಗ್ರಾಮ ಆರೋಗ್ಯ ತರಬೇತಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಗ್ರಾಮ ಮಟ್ಟದಲ್ಲಿ ಗ್ರಾಮಸ್ಥರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪಂಚಾಯತ ಚುನಾಯಿತ ಪ್ರತಿನಿಧಿಗಳ,ಅಧಿಕಾರಿಗಳ, ಆರೋಗ್ಯ ಇಲಾಖೆಯವರ,ಶಿಕ್ಷಣ ಇಲಾಖೆಯವರ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ, ಸಾರ್ವಜನಿಕರ ಪಾಲ್ಗೊಳ್ಳುವಿಕೆ, ಜವಾಬ್ದಾರಿ, ಕರ್ತವ್ಯದ ಕುರಿತು, ಸಹಭಾಗಿತ್ವದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.

300x250 AD

ಆರೋಗ್ಯ ಇಲಾಖೆಯ ಗೀತಾ ಬಿ. ಎಚ್ಇಓ ಅಧಿಕ ರಕ್ತದೊತ್ತಡ(ಬಿ. ಪಿ), ಮಧುಮೇಹ,ಕ್ಷಯ, ಅಪೌಷ್ಟಿಕತೆ ಮತ್ತು ರಕ್ತಹೀನತೆ, ಮುಟ್ಟಿನ ಸಮಸ್ಯೆ, ವೈಯುಕ್ತಿಕ ಸ್ವಚ್ಛತೆ, ಮಾನಸಿಕ ಆರೋಗ್ಯ ಇತ್ಯಾದಿ ವಿಷಯಗಳ ಕುರಿತು ಕಾಯಿಲೆಗಳ ಲಕ್ಷಣಗಳು,ಚಿಕಿತ್ಸೆ, ಪರಿಹಾರೋಪಾಯಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕಿ ನಾಗರತ್ನ ಬಾಲ್ಯ ವಿವಾಹ ಹಾಗೂ ಮಹಿಳೆ ಮತ್ತು ಮಕ್ಕಳ ಅನೈತಿಕ ಕಳ್ಳ ಸಾಗಾಟನೆಯ ವಿಷಯದ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಪ್ರಕಾಶ ಆರ್. ಹಾಲಮ್ಮನವರ್ ಉಪಕಾರ್ಯದರ್ಶಿ ಜಿಲ್ಲಾ ಪಂಚಾಯತ ಕಾರವಾರರವರು ಸಭೆಯಲ್ಲಿ ಉಪಸ್ಥಿತರಿದ್ದು ಗ್ರಾಮ ಆರೋಗ್ಯ ತರಬೇತಿಯ ಬಗ್ಗೆ ಮಾಹಿತಿ ಪಡೆದುಕೊಂಡು ಉಪಯುಕ್ತ ಸಲಹೆ,ಸೂಚನೆಗಳನ್ನು ನೀಡಿದರು.ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಹಮ್ಮದ್ ಹನೀಫ್ ರವರು ಕಾರ್ಯಕ್ರಮದ ಕುರಿತು ಮಾತನಾಡಿದರು. ತರಬೇತಿಯಲ್ಲಿ ಆರೋಗ್ಯ ತಪಾಸಣೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿಯಾದ ವಿಜಯಾ ನಾಯ್ಕ ಮಾಡಿದರು.ತರಬೇತಿಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಅರುಣ ದೇಸಾಯಿ, ಉಪಾಧ್ಯಕ್ಷೆ ದಾಕ್ಷಾಯಣಿ ದಾನಶೂರ,ಸದಸ್ಯರಾದ ಧವಳೋ ಗಣೇಶ ಸಾವರ್ಕರ್, ಸುಮನಾ ಹರಿಜನ, ಶೋಭಾ. ಆರ್.ನಂದಿಗದ್ದೆ ಶಾಲೆಯ ಮುಖ್ಯ ಶಿಕ್ಷಕರಾದ ಜನಾರ್ದನ ಹೆಗಡೆ,ಸಹ ಶಿಕ್ಷಕರಾದ ಭುವನೇಶ್ವರ ಮೇಸ್ತಾ, ಗುಂದ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಜೋಸೆಫ್ ಬಿ. ಜಿ,ಸಹಶಿಕ್ಷಕರಾದ ಗೋಕುಲ್ ಎಸ್.ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ ಸಿಬ್ಬಂದಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ ಕಾರ್ಯದರ್ಶಿ ಗಜಾನನ ಸಾವರ್ಕರ್ ಕೊನೆಯಲ್ಲಿ ವಂದಿಸಿದರು.

Share This
300x250 AD
300x250 AD
300x250 AD
Back to top