ಕುಮಟಾ: ಆಧುನಿಕತೆಯ ಯುಗದಲ್ಲಿ ಮರೆಯಾಗುತ್ತಿರುವ ‘ಭಜನಾ ಯಾಮಾಷ್ಟಕ’ ತಾಲೂಕಿನ ಮುರೂರಿನ ಸಿದ್ದದುರ್ಗಾ ದೇವಳದಲ್ಲಿ ಪ್ರಾರಂಭವಾದ ಇಪ್ಪತ್ನಾಲ್ಕು ಗಂಟೆಯ ನಂತರ ಸಂಪನ್ನವಾಗಿದೆ.
ಅ.19 ರ ಬೆಳಿಗ್ಗೆ ಆರು ಗಂಟೆಯಿಂದ ಯಾಮಾಷ್ಟಕ ಸಿದ್ದದುರ್ಗಾ ದೇವಿಯ ಎದುರು ಪ್ರಾಂಗಣದಲ್ಲಿ ಪ್ರಾರಂಭಗೊಂಡಿತ್ತು. ಪ್ರತಿ ಮೂರು ತಾಸಿಗೆ ಒಂದು ಯಾಮ ಎಂದು ಕರೆಯಲಾಗುತ್ತದೆ. ಇಪ್ಪತ್ನಾಲ್ಕು ಗಂಟೆಗೆ ಎಂಟು ಯಾಮದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಮುರೂರು -ಕಲ್ಲಬ್ಬೆ ಗ್ರಾಮದ ವಿವಿಧ ಕೇರಿಗಳಿಂದ ಭಕ್ತರು ಆಗಮಿಸಿ ಭಜನಾ ಸೇವೆ ಗೈದರು. ಮಹಿಳೆಯರು ಕೂಡ ಪಾಲ್ಗೊಂಡಿದ್ದರು. ಮರೆಯಾಗುತ್ತಿರುವ ಭಜನಾ ಯಾಮಾಷ್ಟಕ ಮತ್ತೆ ಪ್ರಾರಂಭವಾದ ಬಗ್ಗೆ ಊರ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.