ಯಲ್ಲಾಪುರ: ಪಟ್ಟಣದ ಕಾಳಮ್ಮನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಸ್ತೆಯಲ್ಲಿ ವೇಗವಾಗಿ ಬೈಕ್ ಚಲಾಯಿಸಿ, ನಾಯಿಯ ಕಾಲ ಮೇಲೆ ಬೈಕ್ ಹಾಯಿಸಿದ್ದ ಯುವಕನನ್ನು ಹಿಡಿದ ಸ್ಥಳೀಯರು, ಅವರಿಂದಲೇ ನಾಯಿಗೆ ಚಿಕಿತ್ಸೆ ಕೊಡಿಸಿದ್ದಾರೆ.
ಯುವಕನೊಬ್ಬ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು, ನಾಯಿಯ ಕಾಲಿನ ಮೇಲೆ ಹಾಯಿಸಿ, ಕಾಲು ಮುರಿದು ಹೋಗಿತ್ತು. ತಕ್ಷಣ ಸ್ಥಳೀಯರು ಅವನನ್ನು ಹಿಡಿದು, ಅವನ ಮೂಲಕವೇ ನಾಯಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಅವನದೇ ಆರೈಕೆಯಲ್ಲಿ ಇದೀಗ ನಾಯಿ ಓಡಾಡುವ ಹಂತಕ್ಕೆ ಗುಣವಾಗಿದೆ.
ಪಟ್ಟಣದ ಸಣ್ಣ ಓಣಿಗಳಲ್ಲಿ ವೇಗವಾಗಿ ಬೈಕ್ ಚಲಾಯಿಸಿ, ಪ್ರಾಣಿಗಳಿಗೆ ನೋವುಂಟು ಮಾಡುವವರಿಗೆ ಕಾಳಮ್ಮನಗರದ ಜನತೆ ಎಚ್ಚರಿಕೆ ನೀಡಿದ್ದಾರೆ.
ವೇಗದ ಬೈಕ್ ಚಾಲನೆ: ನಾಯಿ ಕಾಲು ಮುರಿತ
