ಸಿದ್ದಾಪುರ: ಮಹರ್ಷಿ ವಾಲ್ಮೀಕಿಯವರು ರಚಿಸಿದ ರಾಮಾಯಣ ಜಗತ್ತಿನಲ್ಲಿಯೇ ಇದೊಂದು ಅದ್ಬುತ ಮಹಾಕಾವ್ಯ. ಈ ಮಹಾಕಾವ್ಯವನ್ನು ಪ್ರತಿಯೊಬ್ಬರೂ ಈ ಮಹಾಕಾವ್ಯವನ್ನು ಓದಿಕೊಂಡು ಅದರಲ್ಲಿರುವ ಆದರ್ಶಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ ಎಂ.ಆರ್.ಕುಲಕರ್ಣಿ ಹೇಳಿದರು.
ಸ್ಥಳೀಯ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ಪಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಗುರುವಾರ ಮಾತನಾಡಿದರು.
ಪಪಂ ಸದಸ್ಯ ವೆಂಕೋಬ ಕಾರ್ಯಕ್ರಮ ಉದ್ಘಾಟಿಸಿದರು. ಪಪಂ ಸದಸ್ಯರಾದ ನಂದನ ಬೋರ್ಕರ್, ಗುರುರಾಜ ಶಾನಭಾಗ್, ಪುಟ್ಟಪ್ಪ ವಾಲ್ಮೀಕಿ, ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ಪಪಂ ಮುಖ್ಯಾಧಿಕಾರಿ ಜೆ.ಆರ್.ನಾಯ್ಕ,ರಮೇಶ ಬೇಡರ್, ಮೇಲುಗಿರಿಯಪ್ಪ ತಳವಾರ ಇತರರಿದ್ದರು.
ಬಿಳಗಿ ಜ್ಞಾನಸಾಗರ ಪಪೂ ಕಾಲೇಜಿನ ಉಪನ್ಯಾಸಕ ವಿರುಪಾಕ್ಷಪ್ಪ ಎಸ್.ಮೇಟಿ ಅವರು ವಾಲ್ಮೀಕಿ ಮಹರ್ಷಿ ಅವರ ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ಶಾರದಾ ಪುಟ್ಟಪ್ಪ ವಾಲ್ಮೀಕಿ ಅವರನ್ನು ಸನ್ಮಾನಿಸಲಾಯಿತು. ಹಾಗೂ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಪಡೆದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಬಸವರಾಜ ಬಂಡೇರ ಸ್ವಾಗತಿಸಿದರು. ವಿನೋದಾ ಜಿ.ನಾಯ್ಕ ವಂದಿಸಿದರು. ಈಶ್ವರ ರಾಗಿಹೊಸಳ್ಳಿ ನಿರ್ವಹಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದೊಂದಿಗೆ ಜಾನಪದ ಕಲಾ ತಂಡದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.