Slide
Slide
Slide
previous arrow
next arrow

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳಿಂದ ಮುಷ್ಕರ

300x250 AD

ಸಿದ್ದಾಪುರ: ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ನೆಹರೂ ಮೈದಾನದಲ್ಲಿ ರಾಜ್ಯ ಸಂಘದ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ಕೈಗೆ ಕಪ್ಪು ಪಟ್ಟಿ ಧರಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.

ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಗ್ರಾಮ ಆಡಳಿತಾಧಿಕಾರಿಗಳು ಮೌನ ಮುಷ್ಕರ ನಡೆಸುತ್ತಿದ್ದು ಸ್ಥಳಕ್ಕೆ ತಹಸೀಲ್ದಾರ ಎಂ.ಆರ್.ಕುಲಕರ್ಣಿ ಭೇಟಿ ನೀಡಿ ಮುಷ್ಕರ ನಿರತ ಗ್ರಾಮ ಆಡಳಿತಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಹರೀಶ ನಾಯ್ಕ ಅವರು ನಾವು 21ಕ್ಕೂ ಹೆಚ್ಚು ತಂತ್ರಾಂಶಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುತ್ತಿದ್ದು ನಮಗೆ ಉತ್ತಮ ಸುವ್ಯವಸ್ಥಿತ ಕಚೇರಿ, ಟೇಬಲ್, ಖರ್ಚಿ, ಅಲ್ಮೆರಾಗಳು, ಕೆಲಸ ನಿರ್ವಹಿಸಲು ಅಗತ್ಯವಾಗಿರುವ ಮೊಬೈಲ್, ಕಂಪ್ಯೂಟರ್, ಸ್ಕ್ಯಾನರ್, ಪ್ರಿಂಟರ್, ಡಾಟಾ ಪ್ಯಾಕೇಜ್‌ನ್ನು ಸರ್ಕಾರ ಪೂರೈಸಬೇಕು.

ನಿತ್ಯ ಒತ್ತಡದಲ್ಲಿಯೇ ಕಾರ್ಯನಿರ್ವಹಿಸಬೇಕಾದ ಸ್ಥಿತಿ ನಮ್ಮದಾಗಿದೆ. ಸರ್ಕಾರದ ಯಾವುದೇ ಯೋಜನೆ ಬಂದರೂ ನಾವು ಕಾರ್ಯನಿರ್ವಹಿಸಬೇಕಾಗಿದೆ. ಮೊಬೈಲ್ ತಂತ್ರಾಶದ ಕೆಲಸದ ವಿಚಾರವಾಗಿ ಅಮಾನತ್ತುಗೊಂಡವರ ಅಮನತ್ತು ರದ್ದುಪಡಿಸಬೇಕು. ಪ್ರವಾಸ ಭತ್ಯೆ ಹೆಚ್ಚಿಸಬೇಕು, ರಿಸ್ಕ್ ಅಲವೆನ್ಸ್ ನೀಡಬೇಕು. ಜಾಬ್ ಕಾರ್ಡ ನಿರ್ಧರಿಸಬೇಕು. ಕ್ಷೇತ್ರಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವಾಗ ಜೀವ ಹಾನಿ ಆದಲ್ಲಿ 25ಲಕ್ಷ ರೂ. ಗಳ ಪರಿಹಾರ ನೀಡಬೇಕು. ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ನೀಡಬೇಕು ಎನ್ನುವ ವಿಷಯ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ ಮನವಿಯನ್ನು ತಹಸೀಲ್ದಾರ ಎಂ.ಆರ್.ಕುಲಕರ್ಣಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಸಲ್ಲಿಸಿದರು.

300x250 AD

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಯೋಗೇಶ ಎಂ,ಅಧ್ಯಕ್ಷ ಕೃಷ್ಣ ಈಶ್ವರ ನಾಯ್ಕ, ಉಪಾಧ್ಯಕ್ಷ ಶೇಖರ ಕಾಲೇಕರ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಎನ್.ಆರ್, ಸಂಘಟನಾ ಕಾರ್ಯದರ್ಶಿ ಯೋಗೇಶ ಆರ್, ಖಜಾಂಚಿ ರೂಪಾ ಎಲ್, ಕಾರ್ಯದರ್ಶಿ ವಿದ್ಯಾಶ್ರೀ ಸಿ, ಹನುಮಂತಪ್ಪ ವೈ, ಪ್ರತಿಭಾ ಮರಾಠಿ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮ ಆಡಳಿತಾಧಿಕಾರಿಗಳಿದ್ದರು.

Share This
300x250 AD
300x250 AD
300x250 AD
Back to top