Slide
Slide
Slide
previous arrow
next arrow

ಕ್ರೀಡಾಕೂಟ: ಚಂದನ ಪಿಯು ಕಾಲೇಜ್ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

300x250 AD

ಶಿರಸಿ: ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಪ.ಪೂ ಕಾಲೇಜುಗಳ ಕ್ರೀಡಾಕೂಟದಲ್ಲಿ ಇಲ್ಲಿನ ಚಂದನ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ವಿಬಾಗದಲ್ಲಿ ಹ್ಯಾಮರ್‌ ಥ್ರೋನಲ್ಲಿ ವರುಣ ಮಡಿವಾಳ ದ್ವಿತೀಯ ಸ್ಥಾನ, ಷಾಟ್‌‌ಪುಟ್‌‌ನಲ್ಲಿ  ಅಬ್ದುಲ್‌ ರಿಯಾನ್‌ ದ್ವಿತೀಯ ಸ್ಥಾನ, ಯೋಗ ಸ್ಪರ್ಧೆಯಲ್ಲಿ ಸುನಿಧಿ ಹೆಗಡೆ, ಹಾಗೂ ರಜತ್‌ ಗೌಡ, ಚೆಸ್‌‌ನಲ್ಲಿ ಪ್ರೀತಮ್‌ ಹೆಗಡೆ, ಭುವನ ಹೆಗಡೆ, ಥ್ರೋ ಬಾಲ್‌‌ನಲ್ಲಿ ಕವನಾ ನಾಯಕ, ನಿಖಿತಾ ಶೇಟ್‌, ದೃಷ್ಟಿ ನಾಯ್ಕ , ವೈಷ್ಣವಿ ಶೇಟ್‌, ಷಟಲ್‌ ಬ್ಯಾಡ್ಮಿಂಟನ್‌‌ನಲ್ಲಿ ದೀಕ್ಷಾ ಹೆಗಡೆ, ವೈದೇಹಿ ಹೆಗಡೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

300x250 AD

ವಿದ್ಯಾರ್ಥಿಗಳ  ಸಾಧನೆಗೆ ಪ್ರಾಚಾರ್ಯರಾದ ಡಾ.ಆರ್‌.ಎಮ್‌.ಭಟ್‌, ಸಂಸ್ಥಾಪಕರು ಹಾಗೂ ಕಾರ್ಯದರ್ಶಿಗಳಾದ ಎಲ್‌.ಎಮ್‌.ಹೆಗಡೆ, ಅಧ್ಯಕ್ಷರಾದ ವಿ.ಜಿ.ಜೋಶಿ, ಸಿ.ಇ.ಓ ಆದ ಸಿ.ಡಿ ನಾಯ್ಕ , ಆಡಳಿತ ಮಂಡಳಿಯ ಸದಸ್ಯರು  ಬೋಧಕ ಬೋಧಕೇತರ ಸಿಬ್ಬಂದಿಗಳು  ಹರ್ಷ ವ್ಯಕ್ತಪಡಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಶುಭ ಕೋರಿದ್ದಾರೆ.

Share This
300x250 AD
300x250 AD
300x250 AD
Back to top