Slide
Slide
Slide
previous arrow
next arrow

ಸರ್ಕಾರದಿಂದ ಹಂಚಿಕೆಯಾದ ಮನೆ ಅನಧೀಕೃತವೆಂದು ಪರಿಗಣಿಸಲು ಸಾಧ್ಯವಿಲ್ಲ: ಕೆ.ಜಿ.ನಾಯ್ಕ್

300x250 AD

ಸಿದ್ದಾಪುರ ಪ.ಪಂ.ಸಾಮಾನ್ಯ ಸಭೆಯಲ್ಲಿ ದುಪ್ಪಟ್ಟು ತೆರಿಗೆ ಪಾವತಿ ಕುರಿತು ಚರ್ಚೆ

ಸಿದ್ದಾಪುರ: ಸರ್ಕಾರದಿಂದ ಸಹಾಯಧನ ಪಡೆದ ಮತ್ತು ವಾಜಪೇಯಿ ನಿವೇಶನ ಪಡೆದ ಮನೆಗಳಿಗೆ ಅನಧಿಕೃತ ಮನೆಗಳೆಂದು ದುಪ್ಪಟ್ಟು ತೆರಿಗೆ ವಿಧಿಸಲಾಗುತ್ತಿದೆ. ಸರ್ಕಾರದಿಂದ ಹಂಚಿಕೆಯಾದ ಮನೆಗಳು ಅನಧೀಕೃತ ಆಗಲು ಹೇಗೆ ಸಾಧ್ಯ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್ ಪ್ರಶ್ನಿಸಿದರು.

ಪಟ್ಟಣ ಪಂಚಾಯಿತಿಯ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿ ಗುರುವಾರ ಅವರು ಮಾತನಾಡಿದರು. ಸರ್ಕಾರದಿಂದ ಹಂಚಿಕೆಯಾದ ನಿವೇಶನಗಳನ್ನು ಅನಧೀಕೃತ ಎಂದು ಪರಿಗಣಿಸಬಾರದು. ದುಪ್ಪಟ್ಟು ತೆರಿಗೆ ಪಡೆಯುತ್ತಿರುವುದನ್ನು ತಕ್ಷಣ ನಿಲ್ಲಿಸಿ ಎಂದು ಆಗ್ರಹಿಸಿದರು.

ಪಂಚಾಯಿತಿಯಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಿದ್ದು ತೆರಿಗೆ ಸಂಗ್ರಹಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. 41 ಲಕ್ಷರೂ ಆಸ್ತಿಗೆ ತೆರಿಗೆ ಬಾಕಿ ಇದ್ದು, 47 ಲಕ್ಷ ರೂ.ಗಳಷ್ಟು ನೀರಿನ ಕರ ಬರಬೇಕಿದೆ. ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕೆಂದು ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು.

300x250 AD

ಮುಖ್ಯಾಧಿಕಾರಿ ಜಗದೀಶ ಆರ್.ನಾಯ್ಕ ತೆರಿಗೆ ಸಂಗ್ರಹಣೆ ಆಗುತ್ತಿರುವ ವಿಳಂಬವನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ 2024-25ನೇ ಸಾಲಿಗೆ 15ನೇ ಹಣಕಾಸು & ಪಂಚಾಯಿತಿ ಜಲನಿಧಿಯಡಿ ಕೈಗೊಳ್ಳುವ ಕಾಮಗಾರಿಗಳ ನಿರ್ವಹಣೆಗೆ ಸ್ವೀಕೃತ ಟೆಂಡರುಗಳನ್ನು ಪರಿಶೀಲಿಸಿ ಮಂಜೂರಾತಿ ನೀಡಲಾಯಿತು.
2025ರ ಬೇಸಿಗೆ ದಿನಗಳಲ್ಲಿ ಪಟ್ಟಣದ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲು ಹುಸೂರು ಡ್ಯಾಂನ ಕೋಡಿಗೆ ಉಸುಕು ಮತ್ತು ಮಣ್ಣಿನ ಬಂಡ್ ನಿರ್ಮಿಸುವ ಕಾಮಗಾರಿ ಕೈಗೊಳ್ಳಲು ಕ್ರಿಯಾ ಯೋಜನೆಗೆ ಮತ್ತುಅಂದಾಜು ಪತ್ರಿಕೆಗೆ ಮಂಜೂರಾತಿ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಿ ಅನುಮೋದನೆ ನೀಡಲಾಯಿತು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕಾಗಿ ಪ್ರಾಣಿಜನನ ನಿಯಂತ್ರಿಸುವ ಕುರಿತು ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಕ್ರಿಯಾಯೋಜನೆ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ ನಾಯ್ಕ ಕೊಂಡ್ಲಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ವಿನಯ ಹೊನ್ನೇಗುಂಡಿ ಮತ್ತು ಸದಸ್ಯರುಇದ್ದರು.

Share This
300x250 AD
300x250 AD
300x250 AD
Back to top