ಸಿದ್ದಾಪುರ: ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಸಭಾಭವನದಲ್ಲಿ ರಂಗಸೌಗಂಧ ಸಿದ್ದಾಪುರ ಇವರಿಂದ ದುರ್ಗಾವಿನಾಯಕ ದೇವಸ್ಥಾನ ಹಾಗೂ ದುರ್ಗಾವಿನಾಯಕ ಕೃಷಿಕ ಯುವಕ ಸಂಘದ ಸ್ಥಾನಿಕ ನೆರವಿನೊಂದಿಗೆ ‘ರಕ್ತ ರಾತ್ರಿ’ ಪೌರಾಣಿಕ ನಾಟಕ ಸೆ.28ರಂದು ಸಂಜೆ 7ರಿಂದ ಪ್ರದರ್ಶನಗೊಳ್ಳಲಿದೆ.
ಈ ಸಂದರ್ಭದಲ್ಲಿ ಟಿಎಸ್‌ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ದೇವಸ್ಥಾನದ ಮೊಕ್ತೇಸರ ಶ್ರೀಧರ ಹೆಗಡೆ ಪೇಟೇಸರ ಉಪಸ್ಥಿತರಿರುತ್ತಾರೆ.
ನಂತರ ಕಂದಗಲ್ ಹನುಮಂತರಾಯ ರಚನೆಯ ಗಣಪತಿ ಹೆಗಡೆ ಹುಲಿಮನೆ ನಿರ್ದೇಶನದ ರಕ್ತ ರಾತ್ರಿ ನಾಟಕ ಪ್ರದರ್ಶನಗೊಳ್ಳಲಿದೆ.
ಸೆ.28ಕ್ಕೆ ‘ರಕ್ತ ರಾತ್ರಿ’ ನಾಟಕ
