Slide
Slide
Slide
previous arrow
next arrow

‘ಹೆದ್ದಾರಿ ಕಾಮಗಾರಿಯ ಸಂಪೂರ್ಣ ಚಿತ್ರಣದ ಸ್ಪಷ್ಟೀಕರಣ ನೀಡಿ: ತಪ್ಪಿದ್ದಲ್ಲಿ ಹೋರಾಟ ಎದುರಿಸಿ’

300x250 AD

ಭಟ್ಕಳ ನಾಗರಿಕರ ಹಿತರಕ್ಷಣಾ ವೇದಿಕೆಯಿಂದ‌ ಐಆರ್‌ಬಿ ಅಧಿಕಾರಿಗಳಿಗೆ ಎಚ್ಚರಿಕೆ

ಭಟ್ಕಳ: ಐ ಆರ್.ಬಿ ಅಧಿಕಾರಿಗಳು ಭಟ್ಕಳದಲ್ಲಿ ಯಾವ ರೀತಿ ಕಾಮಗಾರಿ ನಡೆಯುತ್ತದೆ ಎನ್ನುವ ಚಿತ್ರಣವನ್ನು ಭಟ್ಕಳ ತಾಲೂಕು ನಾಗರಿಕರ ಹಿತರಕ್ಷಣಾ ವೇದಿಕೆ ಮುಖಂಡರಿಗೆ ಸ್ಪಷ್ಟಿಕರಣ ನೀಡಬೇಕು. ಇಲ್ಲವಾದರೆ ಜಿಲ್ಲೆಯಾದ್ಯಂತ ಹೋರಾಟಕ್ಕೆ ಕರೆ ನೀಡುತ್ತೇವೆ ಹಾಗೂ ರಸ್ತೆ ತಡೆ ಮಾಡಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುತ್ತೇವೆ ಎಂದು ಭಟ್ಕಳ ತಾಲೂಕು ನಾಗರಿಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಸತೀಶ ಕುಮಾರ ಎಚ್ಚರಿಕೆ ನೀಡಿದರು.

ಅವರು ಬುಧವಾರದ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಂಗಳವಾರ ಬೆಳಿಗ್ಗೆ ಭಟ್ಕಳದಲ್ಲಿ ಒಂದೂವರೆ ತಾಸು ಸುರಿದ ಮಳೆಗೆ ರಂಗಿನಕಟ್ಟೆಯ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡು ಅನೇಕ ಮನೆಗಳಿಗೆ ನೀರು ನುಗ್ಗಿದೆ. ಇದಕ್ಕೆಲ್ಲ ಹೊಣೆ ಯಾರು ಈ ಹಾನಿಯನ್ನು ಯಾರು ಭರಿಸುತ್ತಾರೆ. ಈ ವ್ಯಾಪ್ತಿಯಲ್ಲಿ ಎಲ್ಲೂ ಕೂಡ ಸಂಪೂರ್ಣವಾದಂತಹ ಕಾಮಗಾರಿ ಮುಗಿದಿರುವ ಒಂದೇ ಒಂದು ಉದಾಹರಣೆ ಎಲ್ಲಿಯೂ ಇಲ್ಲ. ಇದೊಂದು ಖೇದಕರವಾದ ವಿಷಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಅನಾಹುತದ ಕುರಿತಂತೆ ಸಹಾಯಕ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಸ್ಥಳ ವೀಕ್ಷಣೆ ಮಾಡುವಂತೆ ಆಗ್ರಹಿಸಿದ್ದೆವು. ಬಳಿಕ ಆಗಿನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ ಹೆಚ್ಚಿನ ಮುತುವರ್ಜಿ ವಹಿಸಿ ಜಿಲ್ಲಾಮಟ್ಟದ ಮತ್ತು ನ್ಯಾಷನಲ್ ಹೈವೆ ಅಧಿಕಾರಿಗಳ ತಂಡ ರಚನೆ ಮಾಡಿ ಅವರೊಂದಿಗೆ ಖುದ್ದು ಜಿಲ್ಲಾಧಿಕಾರಿಗಳು ಬಸ್ ಮುಖಾಂತರ ಕಾರವಾರದಿಂದ ಭಟ್ಕಳ ಗಡಿ ಭಾಗದ ತನಕ ತೆರಳಿ ಸ್ಥಳ ಪರಿಶೀಲನೆ ಮಾಡಿ ಸ್ಥಳೀಯ ಸಮಸ್ಯೆಯನ್ನು ಜನರಿಂದ ಪಡೆದು ವರದಿ ರಚನೆ ಮಾಡಿದ್ದರು. ಆದರೆ ವಾರದೊಳಗೆ ಜಿಲ್ಲಾಧಿಕಾರಿಗಳ ವರ್ಗಾವಣೆಯಾದ ಹಿನ್ನೆಲೆ ರಚನೆಯಾಗಿದ್ದ ವರದಿ ಅಲ್ಲೇ ನೆನೆಗುದಿಗೆ ಬಿತ್ತು. ಆದರೆ ಅದಾದ ಬಳಿಕ ಬಂದ ಯಾವ ಜಿಲ್ಲಾಧಿಕಾರಿಗಳು ಕೂಡ ಮುತುವರ್ಜಿವಹಿಸದೇ ಇರುವುದು ಬೇಸರದ ವಿಷಯಯಾಗಿದೆ ಎಂದರು.

300x250 AD

ಐ.ಆರ್.ಬಿಯ ಅವೈಜ್ಞಾನಿಕ ಕಾಮಗಾರಿ ಅಂಕೋಲಾದ ಶಿರೂರಿನಲ್ಲಿ ನಡೆದ ಬೃಹತ್ ಗುಡ್ಡ ಕುಸಿತದಿಂದ 8 ಮಂದಿ ಸಾವನ್ನಪ್ಪಿದರೆ. ಅವರ ಕುಟುಂಬದವರು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ಎದುರಾಗಿದೆ. ಆ ಎಂಟು ಜನರ ಸಾವಿಗೆ ಐ. ಆರ್.ಬಿ ಹಾಗೂ ನ್ಯಾಷನಲ್ ಹೈವೆ ಅಧಿಕಾರಿಗಳು ನೇರ ಹೊಣೆಯಾಗಿದ್ದಾರೆ.ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಅಪಾಯಕಾರಿ ಆಗಿರುವ ಗುಡ್ಡವೆಂದರೆ ಹೊನ್ನಾವರದ ಕರ್ನಲ್ ಗುಡ್ಡ ಹಾಗೂ ಗುಣವಂತೆ ಸಮೀಪದ ಕೆಳಗಿನೂರು ಗುಡ್ಡವಾಗಿದ್ದು, ಭಟ್ಕಳ ಭಾಗದವರು ಕಾರವಾರದ ಜಿಲ್ಲಾ ಕೆಂದ್ರಕ್ಕೆ ತೆರಳುವುದೆಂದರೆ ನಮ್ಮ ಮನೆ ಮಂದಿಯಲ್ಲಾ ಭಯ ಪಡುವ ಸ್ಥಿತಿ ಎದುರಾಗಿದೆ. ಕಾರಣ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತವಾಗಿದೆ ಎಂದರು.

ಬಳಿಕ ಇನಾಯತವುಲ್ಲಾ ಶಾಬಂದ್ರಿ ಮಾತನಾಡಿ ಈ ಬಾರಿಯ ನಮ್ಮ ಸಭೆಯ ತೀರ್ಮಾಣದಂತೆ ರಸ್ತೆ ಅಗಲೀಕರಣದ ಸಮಸ್ಯೆ ಇಲ್ಲಿಗೆ ಮುಕ್ತಾಯವಾಗ ಬೇಕು. ಈ ಬಗ್ಗೆ ಜಿಲ್ಲಾ ಹಾಗೂ ತಾಲೂಕಾ ಆಡಳಿತ ಹೆಚ್ಚಿನ ಮುತುವರ್ಜಿವಹಿಸಿ ವಿಶೇಷವಾಗಿ ಭಟ್ಕಳ ತಾಲೂಕಿನಲ್ಲಿ ರಸ್ತೆ ಅಗಲೀಕರಣದ ಸಮಸ್ಯೆಗಳನ್ನು ಪರಿಹರಿಸಬೇಕು ಹಾಗೂ ತಾಲೂಕಿನ ಯಾವ ಯಾವ ಭಾಗದಲ್ಲಿ 35, ಮೀಟರ 45 ಮೀಟರ , ಚರಂಡಿ, ಸರ್ವಿಸ್ ರಸ್ತೆ , ಪ್ಲೇ ಓವರ್, ರೋಪ್ ವೇ ಇಲ್ಲೆಲ್ಲದರ ಮಾಹಿತಿ ತಿಳಿಸಬೇಕು. ಈ ಬಾರಿಯ ನಮ್ಮ ಪಟ್ಟು ಕಾಮಗಾರಿಗಳೆಲ್ಲ ಸಮಪರ್ಕವಾಗಿ ಜನರಿಗೆ ಅನುಕೂಲವಾಗುವಂತೆ ನಡೆಯಬೇಕು. ಈ ಬಗ್ಗೆ ಎಲ್ಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಹೋರಾಟ ಸಮಿತಿಯನೊಳಗೊಂಡಂತೆ ನಿಯೋಗ ರಚಿಸಿಕೊಂಡು ಎಂ.ಪಿ, ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ಬಳಿ ತೆರಳಿ ಸಮಸ್ಯೆ ಪರಿಹಾರಕ್ಕೆ ಒತ್ತಡ ಹೇರುವ ತೀರ್ಮಾನ ವೇದಿಕೆಯಿಂದ ತೆಗೆದುಕೊಂಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಅಲ್ತಾಪ್ ಕರೂರಿ, ಹೆದ್ದಾರಿ ಹೋರಾಟ ಸಮಿತಿ ಸಂಚಾಲಕ ರಾಜೇಶ ನಾಯಕ, ಕಾರ್ಯದರ್ಶಿ ಇಮ್ರಾನ್ ಲಂಖಾ, ಮಜ್ಲಿಸೆ ಇಸ್ಲಾ ಒ ತಂಜಿಂ ಅಧ್ಯಕ್ಷ ಇನಾಯತುಲ್ಲ ಶಾಬಂದ್ರಿ,  ಮಜ್ಲಿಸೆ ಇಸ್ಲಾ ಒ ತಂಜಿಂ ಮೊಹಮ್ಮದ್ ಕತೀಬ್,ಕಾರ್ಯದರ್ಶಿ ಎಂ.ಜೆ.ರಖೀಬ್, ರಾಬಿತಾ ಸೂಸೈಟಿಯ ಪ್ರಧಾನ ಕಾರ್ಯದರ್ಶಿ ಉದ್ಯಮಿ ಡಾ.ಅತಿಕುರ‍್ರಹ್ಮಾನ್, ಎಮ್.ಡಿ.ನಾಯ್ಕ, ರಾಮನಾಥ ಬಳಗಾರ, ಪ್ರಭಾಕರ‌ ನಾಯ್ಕ, ಟಿ.ಡಿ.ನಾಯ್ಕ, ಪಾಂಡುರಂಗ ನಾಯ್ಕ ಮುಂತಾದವರು ಇದ್ದರು

Share This
300x250 AD
300x250 AD
300x250 AD
Back to top