Slide
Slide
Slide
previous arrow
next arrow

ಲಯನ್ಸ್ ಪ್ರಾಚಾರ್ಯ ಶಶಾಂಕ ಹೆಗಡೆಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

300x250 AD

ಶಿರಸಿ: ಇಲ್ಲಿನ ಲಯನ್ಸ್ ಸಮೂಹ ಶಾಲೆಗಳ ಹಾಗೂ ಡಾಕ್ಟರ್ ಭಾಸ್ಕರ್ ಸ್ವಾದಿ ಮೆಮೋರಿಯಲ್ ಲಯನ್ಸ್ ಪಿ.ಯು.ಕಾಲೇಜಿನ ಪ್ರಾಚಾರ್ಯರಾದ ಶಶಾಂಕ ಹೆಗಡೆ ಇವರು ಕರ್ನಾಟಕ ಖಾಸಗಿ ಶಾಲಾ ಶಿಕ್ಷಕರ ಸಂಘ ನೀಡುವ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸೆ.28ರಂದು ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ಶಿರಸಿ ಸಮೀಪದ ಸಾಲ್ಕಣಿ ಗ್ರಾಮದ ನೈಗಾರ ಎಲೆಮನೆಯ ತಿಮ್ಮಯ್ಯ ಹೆಗಡೆ ಶ್ರೀಮತಿ ಶಶಿಕಲಾ ಹೆಗಡೆ ಇವರ ಪುತ್ರನಾಗಿರುವ ಶಶಾಂಕ ಹೆಗಡೆ ಪ್ರತಿಭಾವಂತ ಯಕ್ಷಗಾನ ಕಲಾವಿದರು ಹೌದು. ಕನ್ನಡ, ಮನೋವಿಜ್ಞಾನ ಹಾಗೂ ಶಿಕ್ಷಣ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾದ ಇವರು ಶಿಕ್ಷಕರಾಗಿ, ಪ್ರಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ, ಸಂಪನ್ಮೂಲ ನಿರ್ದೇಶಕರಾಗಿ, ಪ್ರಾಂಶುಪಾಲರಾಗಿ ಹುಲೇಕಲ್, ನೀರ್ನಳ್ಳಿ, ಬೆಳಗಾವಿ, ಸಾಗರ, ಜಮಖಂಡಿ ಬಾಗಲಕೋಟೆ, ಕೊಪ್ಪಳದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಸಿರಸಿ ಲಯನ್ಸ್ ಶಾಲೆಯ ಹಾಗೂ ನೂತನ ಪಿಯು ಕಾಲೇಜಿನ ಪ್ರಾಚಾರ್ಯರಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.

300x250 AD

ಆರೋಹಿ ಸಂಸ್ಥೆಯ ಮೂಲಕ ಶಿರಸಿಯಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ವಿದ್ಯಾಲಯ ನಡೆಸುತ್ತಿರುವ ಮಡದಿ ದೀಪಾ ಶಶಾಂಕ್ ಹೆಗಡೆ ಮಕ್ಕಳಾದ ಅಯನಾ,ಅಮೇಯರಿಂದ ಕೂಡಿದ ಪ್ರತಿಭಾವಂತ ಕುಟುಂಬ ಇವರದು.

ರಾಜ್ಯಮಟ್ಟದ ಈ ಪ್ರಶಸ್ತಿಗೆ ಆಯ್ಕೆಯಾದ ಶಶಾಂಕ‌ ಹೆಗಡೆ ಅವರನ್ನು ಶಿರಸಿ ಲಯನ್ಸ ಎಜುಕೇಶನ್ ಸೊಸೈಟಿ ಆಡಳಿತ ಮಂಡಳಿ,ಶಿರಸಿ ಲಯನ್ಸ್ ಸಮೂಹ ಶಾಲೆ ಹಾಗೂ ಕಾಲೇಜಿನ‌ ಶಿಕ್ಷಕ ಶಿಕ್ಷಕೇತರ ಸಮೂಹ ತುಂಬು ಹೃದಯದಿಂದ ಅಭಿವಂದಿಸಿದೆ.

Share This
300x250 AD
300x250 AD
300x250 AD
Back to top