ಶಿರಸಿ: ನಾವು ತೆಗೆದುಕೊಳ್ಳುವ ಆಹಾರದಿಂದ ಆರೋಗ್ಯ ಬಲಗೊಳ್ಳಲಿದೆ ಎಂಬ ತಿಳುವಳಿಕೆ ಜನಜನಿತವಾಗಿದ್ದರೂ, ಆಹಾರವನ್ನು ಎಷ್ಟು ಸ್ವೀಕರಿಸಬೇಕು, ಯಾವ ಕಾಲದಲ್ಲಿ ಯಾವ ಆಹಾರವನ್ನ ಸ್ವೀಕರಿಸಿದರೆ ಒಳಿತು ಎಂಬ ಇತ್ಯಾದಿ ವಿಷಯವನ್ನು ತಿಳಿಸುವುದಕ್ಕೋಸ್ಕರ, ಮತ್ತು ಮನುಷ್ಯನ ಆರೋಗ್ಯಕ್ಕೆ ಆಧ್ಯಾತ್ಮಿಕತೆ ಎಷ್ಟು ಮುಖ್ಯ ಎಂಬ ಸಂಗತಿಗಳ ಕುರಿತಾಗಿ ಆಹಾರ-ಆರೋಗ್ಯ-ಆಧ್ಯಾತ್ಮದ ವಿಚಾರ ಮಂಥನವನ್ನು ಸೆ.29 ಭಾನುವಾರದಂದು ಸುಕರ್ಮ ಯಾಗ ಶಾಲೆಯಲ್ಲಿ ಏರ್ಪಡಿಸಲು ನಿರ್ಧರಿಸಿದ್ದಾರೆ.
ಆರೋಗ್ಯ ಭಾರತಿ ಶಿರಸಿ, ಸುಕರ್ಮ ಯಾಗ ಶಾಲೆ, ಅರಿವು ವೇದಿಕೆ ಯಡಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಶ್ರೀ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು, ಶ್ರೀ ರಾಜಾರಾಮ ಆಶ್ರಮ ಶಿರಳಗಿ ಸಿದ್ದಾಪುರ ಇವರ ದಿವ್ಯ ಸಾನಿಧ್ಯ, ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ. ವಿಷಯ ತಜ್ಞರಾಗಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯ ಡಾ.ಅಶ್ವತ್ಥ ಹೆಗಡೆ ಶಿರಸಿ ಹಾಗೂ ಆಯುರ್ವೇದ ವೈದ್ಯೆ ಡಾ.ಸೌಮ್ಯಶ್ರೀ ಶರ್ಮ ಗೋಕರ್ಣ ಇವರು ಆಗಮಿಸಲಿದ್ದಾರೆ. ಬೆಳಿಗ್ಗೆ 9.30 ಕೆ ಧಾರ್ಮಿಕ ಕಾರ್ಯಕ್ರಮದಿಂದ ಪ್ರಾರಂಭಗೊಳ್ಳಲಿದ್ದು, ಸಾಂಪ್ರದಾಯಿಕ ಶೈಲಿಯ ಉಟೊಪಚಾರದ ವ್ಯವಸ್ಥೆಯೂ ಇರಲಿದೆ. ಈ ವಿಶಿಷ್ಟ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಬೇಕೆಂದು ಸಂಘಟಕರು ಕೋರಿದ್ದಾರೆ. ಕಾರ್ಯಕ್ರಮದ ನಿರೂಪಣೆ ಮತ್ತು ನಿರ್ದೇಶನವನ್ನು ವಿನಾಯಕ ಎಂ. ಭಟ್ ವಹಿಸಲಿದ್ದಾರೆ. ಹೆಚ್ಚಿನ ವಿವರಗಳಿಗೆ ವಾಟ್ಸಾಪ್ ನಂಬರ್Tel:+918762891898 ಸಂಪರ್ಕಿಸಲು ಕೋರಿದೆ.