ಶಿರಸಿ: ಶಿರಸಿ ತಾಲೂಕ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆಯನ್ನು ಪ್ರತಿ ತಿಂಗಳ 3 ನೇ ಶನಿವಾರದಂದು ಹಮ್ಮಿಕೊಳ್ಳಲು ನಿಗಮ ಕಛೇರಿಯಿಂದ ಆದೇಶಿಸಿದ್ದು, ಅದರಂತೆ ಸೆ.21, ಶನಿವಾರದಂದು ಮಧ್ಯಾಹ್ನ 3.00 ರಿಂದ ಸಾಯಂಕಾಲ 5.00 ಗಂಟೆಯವರೆಗೆ ‘ಗ್ರಾಹಕರ ಕುಂದು ಕೊರತೆ’ ಸಭೆಯನ್ನು ಹೆಸ್ಕಾಂ ಕಛೇರಿಯಲ್ಲಿ ನಡೆಸಲಾಗುವುದು.
ಕಾರಣ ಸಾರ್ವಜನಿಕರು ಗ್ರಾಹಕರ ಕುಂದು ಕೊರತೆ ಸಭೆಯಲ್ಲಿ ತಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಚರ್ಚಿಸಲು ಸಭೆಗೆ ಹಾಜರಾಗಲು ಕೋರಲಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ತಿಳಿಸಿರುತ್ತಾರೆ.