Slide
Slide
Slide
previous arrow
next arrow

ವಿಶ್ವ ಓಝೋನ್ ದಿನಾಚರಣೆ: ಪರಿಸರ ಜಾಗೃತಿ ಕಾರ್ಯಕ್ರಮ

300x250 AD

ಅಂಕೋಲಾ: ಕಾರವಾರದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಛೇರಿ, ಸಂಗಮ ಸೇವಾ ಸಂಸ್ಥೆ (ರಿ) ಅಂಕೋಲಾ ಮತ್ತು ಗ್ರಾಮ ಪಂಚಾಯತ ಅಚವೆ, ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಅಂಕೋಲಾದ ಅಚವೆ ಗ್ರಾಮ ಪಂಚಾಯತ ಆವರಣದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಓಝೋನ್ ದಿನಾಚರಣೆ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿ.ಕೆ. ಸಂತೋಷ್ ಉದ್ಘಾಟಿಸಿದರು.

ಅಚವೆ ಗ್ರಾಮ ಪಂಚಾಯತ ಅಧ್ಯಕ್ಷ ಬಾಲಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಗ್ರಾಮವನ್ನು ಸ್ವಚ್ಛವಾಗಿರಿಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸೋಣ ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಡಾ. ಗಣಪತಿ ಹೆಗಡೆ ಓಝೋನ್ ಪದರದ ವಿಶೇಷತೆ ಹಾಗೂ ಅದರ ರಕ್ಷಣೆಯ ಅಗತ್ಯತೆಯಲ್ಲಿ ಜನಸಾಮಾನ್ಯರ ಪಾತ್ರದ ಕುರಿತು ವಿಶೇಷ ಉಪನ್ಯಾಸ ನೀಡಿ, ಓಝೋನ್ (O3) ಪದರವು ವಾತಾವರಣದಲ್ಲಿ ಹರಡಿಕೊಂಡಿರುತ್ತದೆ. ಇದು ನಾವು ತಿಳಿದುಕೊಂಡAತೆ ಪದರವಾಗಿರದೇ (O3) ಅನಿಲವಾಗಿದ್ದು, ಹಲವಾರು ಕೀಲೊ ಮೀಟರ್ ತನಕ ಆವರಿಸಿರುತ್ತದೆ. ಈ ಪದರವು ಸೂರ್ಯನಿಂದ ಬಿಡುಗಡೆಯಾಗುವ ಅತಿ ನೇರಳಾತೀತ / ನೇರಳಾತೀತ ವಿಕಿರಣಗಳನ್ನು ಹೀರಿಕೊಂಡು ಭೂಮಿಗೆ ಅವುಗಳು ತಲುಪುವುದನ್ನು ತಡೆಗಟ್ಟುತ್ತದೆ ಎಂದರು.
ಓಝೋನ್ ಪದರ ಹಾಗೂ ಅದಕ್ಕೆ ಆಗಿರುವ ಅನಾಹುತಗಳ ಬಗ್ಗೆ ಜನರಿಗೆ ಅರಿವಿಲ್ಲ, ಸಕಲ ಜೀವರಾಶಿಗಳ ರಕ್ಷಾ ಕವಚ ಓಝೋನ್ ವಲಯ ಆಗಿದ್ದು, ಅದನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅದಿಲ್ಲದಿದ್ದರೆ ಭೂಮಿಯ ಜೀವಜಂತುಗಳು ಸೂರ್ಯನ ನೇರಳಾತೀತ ಕಿರಣಗಳ ನೇರ ಸ್ಪರ್ಶಕ್ಕೆ ಸಿಕ್ಕಿ ಚರ್ಮ ಸಂಬಂಧಿತ ರೋಗ, ಕಣ್ಣಿನ ತೊಂದರೆ, ಕ್ಯಾನ್ಸರ್‌ಗಳಂತ ಮಾರಕರೋಗಗಳಿಗೆ ಸಿಲುಕುತ್ತವೆ ಹಾಗೂ ಸಸ್ಯ ಸಂಕುಲಗಳು ನಾಶವಾಗುತ್ತಿದ್ದವೆ ಎಂದರು.
ಕಾರ್ಯಕ್ರಮದಲ್ಲಿ ಅಂಕೋಲಾ ವಲಯ ಅರಣ್ಯಾಧಿಕಾರಿ ಪ್ರಶಾಂತ ಪಟಗಾರ, ಅಚವೆ ಗ್ರಾಮ ಪಂಚಾಯತನ ಪಂಚಾಯತ ಅಭಿವೃದ್ಧಿ ಅಧಿಕಾರಿ ವಿಠ್ಠಲ ಬಾಂದೇಕರ, ಅಂಕೋಲಾದ ಸಂಗಮ ಸೇವಾ ಸಂಸ್ಥೆ (ರಿ) ಬಾಳೆಗುಳಿ ಅಧ್ಯಕ್ಷ ರವೀಂದ್ರ ಎನ್.ಶೆಟ್ಟಿ, ಅಂಕೋಲಾದ ಕೌಟುಂಬಿಕ ಸಲಹಾ ಕೇಂದ್ರದ ಕೆ.ಎಲ್.ಇ. ಸಲಹೆಗಾರ ತಿಮ್ಮಣ್ಣ ಭಟ್ಟ ಬಿ, ಗ್ರಾಮ ಪಂಚಾತಯನ ಸದಸ್ಯರುಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top