ಯಲ್ಲಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಅಸ್ಪೃಶ್ಯತೆ ನಿವಾರಣೆ ಶೀರ್ಷಿಕೆ ಅಡಿಯಲ್ಲಿ ಅಮ್ಚೋ ಮೇಳ್ ಸಿದ್ದಿ ಸಾಂಸ್ಕೃತಿಕ ಕಲಾ ತಂಡ ಹಳಿಯಾಳ ಇವರಿಂದ ಬುಧವಾರ ಬೀದಿ ನಾಟಕ ಪ್ರದರ್ಶನ ನಡೆಯಿತು.
ಪ್ರಾಂಶುಪಾಲ ಆರ್. ಡಿ.ಜನಾರ್ಧನ್,ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕಿ ಜ್ಯೋತಿ ಬಿ. ನರೋಟ, ಪ್ರಮುಖರಾದ ನಾಗೇಶ ಮಲಮೇತ್ರಿ, ಸವಿತಾ ನಾಯ್ಕ, ವೇದಾ ಭಟ್ಟ, ನಿರೀಕ್ಷಾ ನಾಯ್ಕ, ನಂದಿತಾ ಭಾಗ್ವತ್ ಭಾಗವಹಿಸಿದ್ದರು.
ಯಲ್ಲಾಪುರದಲ್ಲಿ ಬೀದಿ ನಾಟಕ ಪ್ರದರ್ಶನ
