ಶಿರಸಿ: ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾದ ಟಿ.ಎಸ್.ಎಸ್ ಲಿ.. ಶಿರಸಿ ಇದರ ಮರು ಚುನಾವಣೆಗೆ ಸಂಬಂಧಿಸಿದಂತೆ ಸಹಕಾರ ಸಂಘಗಳ ಜಿಲ್ಲೆಯ ಉಪನಿಬಂಧಕರು ಕಾರವಾರ ಇವರು ದಿನಾಂಕ: 24/05/2024 ರಂದು ನೀಡಿದ ಆದೇಶವನ್ನು ತಡೆಹಿಡಿಯುವಂತೆ ಟಿಎಸ್ಎಸ್ ನ ಹಾಲಿ ಆಡಳಿತ ಮಂಡಳಿ ಎನಿಸಿರುವ ಗೋಪಾಲಕೃಷ್ಣ ವೈದ್ಯರ ತಂಡವು ಕೋರಿದ್ದ ಅರ್ಜಿಯನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಧಾರವಾಡ ಪೀಠ ಗುರುವಾರ ತಿರಸ್ಕರಿಸಿದೆ.
ದಿ ತೊಟಗಾರ್ಸ್ ಕೋ-ಆಫರೆಟಿವ್ ಸೇಲ್ ಸೋಸೈಟಿ ಲಿ., ಶಿರಸಿ ಇದರ ದಿನಾಂಕ:20.08.2023 ರಂದು ನಡೆದ ಚುನಾವಣೆಯಲ್ಲಿ ಲೋಪ ದೋಷಗಳಾಗಿವೆ ಎಂದು ಕೆಲ ಶೇರು ಸದಸ್ಯರು ನೀಡಿದ ದೂರನ್ನು ಪರಿಗಣಿಸಿ ದಿನಾಂಕ:24/05/2024 ರಂದು ಸಹಕಾರ ಸಂಘಗಳ ಉಪನಿಬಂಧಕರು ಕಾರವಾರ ಇವರ ನ್ಯಾಯಾಲಯದಲ್ಲಿ ಮರುಚುನಾವಣೆಗೆ ಹೊರಡಿಸಿದ ಆದೇಶಕ್ಕೆ ತಡೆಯಾಜ್ಞೆ ಕೋರಿ ಹಾಲಿ ಟಿ.ಎಸ್.ಎಸ್ ಆಡಳಿತ ಕಮೀಟಿಯ ಅಧ್ಯಕ್ಷರಾದ ಗೋಪಾಲಕೃಷ್ಣ ವೈದ್ಯ ಹಾಗೂ ಉಳಿದ ನಿರ್ದೇಶಕರ ತಂಡವು ಕೆ.ಎ.ಟಿ ಇದರಲ್ಲಿ ನೀಡಿದ ಅರ್ಜಿಯನ್ನು ಕೆ.ಎ.ಟಿ ಇವರ ನ್ಯಾಯಾಲಯದಲ್ಲಿ ದಿನಾಂಕ: 09.08.2024 ರಂದು ತಿರಸ್ಕರಿಸಿ ವಿಚಾರಣೆಯನ್ನು ಮುಂದುವರೆಸಿರುತ್ತದೆ.
ಕೆಎಟಿಯಲ್ಲಿ ತಡೆಯಾಜ್ಞೆ ಪಡೆಯಲು ವಿಫಲರಾದ ಹಿನ್ನಲೆಯಲ್ಲಿ ಮಾನ್ಯ ಉಚ್ಛ ನ್ಯಾಯಾಲಯ ಧಾರವಾಡ ಪೀಠದಲ್ಲಿ ತಡೆಯಾಜ್ಞೆಗಾಗಿ ಸಲ್ಲಿಸಿದ ಮನವಿ ಕೂಡ ತಿರಸ್ಕೃತವಾಗಿದ್ದು ಇದೂ ಕೂಡ ಗೋಪಾಲಕೃಷ್ಣ ವೈದ್ಯ ಅವರಿಗೆ ನ್ಯಾಯಾಲಯದ ಹೋರಾಟದಲ್ಲಿ ಆದ ತೀವ್ರ ಹಿನ್ನಡೆಯಾಗಿದೆ.
ವಿಶೇಷ ಆಡಳಿತಾಧಿಕಾರಿ ವಿಷಯದಲ್ಲಿ ಮುಂದಿನ ಹೆಜ್ಜೆಯೇನು ?
ಚುನಾವಣಾ ಅನರ್ಹತೆ ವಿಷಯದಲ್ಲಿ ಪ್ರಕರಣವು ಕೆ.ಎ.ಟಿ.ಯಲ್ಲಿ ನಡೆಯುತ್ತಿದ್ದರೆ, ವಿಶೇಷ ಆಡಳಿತಾಧಿಕಾರಿ ಪ್ರಕರಣಕ್ಕೆ ಸಂಬಂಧಿಸಿ ಜೆ.ಅರ್. ಆದೇಶಕ್ಕೆ ತಡೆ ನೀಡಿ ಹೈಕೋರ್ಟ್ ಕಳೆದ ಕೆಲ ದಿನದ ಹಿಂದೆ ತಡೆಯಾಜ್ಞೆ ನೀಡಿತ್ತು. ಅದರಂತೆ ಡಿ. ಅರ್.ಅದೇಶವನ್ನು ಎತ್ತಿ ಹಿಡಿದಿತ್ತು. ಇದಕ್ಕೆ ಸಂಬಂಧಿಸಿ ಹೈಕೋರ್ಟಿನಲ್ಲಿ ಸೆಕೆಂಡ್ ಬೆಂಚ್ ನಲ್ಲಿ ತಡೆಯಾಜ್ಞೆ ನೀಡುವಂತೆ ವೈದ್ಯರ ತಂಡವು ಪ್ರಯತ್ನಿಸುವ ಸಾಧ್ಯತೆ ಇದ್ದು, ಯಾವ ರೀತಿಯ ನಿರ್ಣಯ ಹೈಕೋರ್ಟ್ ತಳೆಯುವುದೆಂದು ಕಾದುನೋಡಬೇಕಿದೆ.