Slide
Slide
Slide
previous arrow
next arrow

ಟಿಎಸ್ಎಸ್‌ನಲ್ಲಿ ‘ನೇತ್ರದಾನ ಅರಿವು ಜಾಗೃತಿ’ ಕಾರ್ಯಕ್ರಮ

300x250 AD

ಶಿರಸಿ: ಇಲ್ಲಿನ ಟಿ.ಎಸ್.ಎಸ್. ಪ್ರಧಾನ ಕಛೇರಿಯಲ್ಲಿ ಸೆ.5ರ ಗುರುವಾರ “ರಾಷ್ಟೀಯ ನೇತ್ರದಾನ ಪಾಕ್ಷಿಕ 2024” ರ ಅಂಗವಾಗಿ “ನೇತ್ರದಾನ ಅರಿವು ಜಾಗೃತಿ” ಕಾರ‍್ಯಕ್ರಮವನ್ನು ಲಯನ್ಸ್ ನಯನ ನೇತ್ರ ಭಂಡಾರ, ಗಣೇಶ ನೇತ್ರಾಲಯ, ಶಿರಸಿ, ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು.

ಸಂಪನ್ಮೂಲ ವ್ಯಕ್ತಿಗಳಾಗಿ ಲಯನ್ಸ ನೇತ್ರ ಭಂಡಾರ ಮುಖ್ಯಸ್ಥ ಡಾ. ಶಿವರಾಮ್ ಕೆ.ವಿ. ಹಾಗೂ ನೇತ್ರ ತಜ್ಞೆ ಡಾ. ಪೂಜಾ ಶೇಟ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಖ್ಯಾತ ನೇತ್ರ ತಜ್ಞರಾದ ಡಾ. ಶಿವರಾಮ್ ಕೆ.ವಿ. ಇವರು ಪವರ್ ಪಾಯಿಂಟ್ ಪ್ರೆಸಂಟೇಷನ್ ಹಾಗೂ ಸಾಕ್ಷ್ಯಚಿತ್ರದ ಮೂಲಕ ನೇತ್ರದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿದರು. ನೇತ್ರದಾನದ ಮಹತ್ವ, ಮರಣದ ನಂತರ ಎಷ್ಟು ಸಮಯದೊಳಗೆ ನೇತ್ರದಾನ ಮಾಡಬೇಕು, ನೇತ್ರದಾನಕ್ಕೆ ಅನುಸರಿಸಬೇಕಾರ ಕ್ರಮಗಳು ಮತ್ತು ಪ್ರಕ್ರಿಯೆಗಳು, ದೇಶವ್ಯಾಪಿ ಇರುವ ನೇತ್ರದ ಅವಶ್ಯಕತೆ ಮತ್ತು ಪೂರೈಕೆ ಪ್ರಮಾಣ, ಜನ ಸಾಮಾನ್ಯರು ಹೇಗೆ ಜಾಗೃತಿ ಮೂಡಿಸಬೇಕು, ಯಾವ ರೀತಿ ಸಮಸ್ಯೆಯಿಂದ ಬಳಲುತ್ತಿರುವವರು ನೇತ್ರವನ್ನು ಅಳವಡಿಸಿಕೊಳ್ಳಬಹುದು ಹಾಗೂ ಇನ್ನಿತರ ಪ್ರಮುಖ ವಿಚಾರಗಳನ್ನು ಹಂಚಿಕೊಂಡರು. ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರಿಂದ ನೇತ್ರದಾನದ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ಡಾ. ಪೂಜಾ ಶೇಟ್ ನೇತ್ರದಾನದ ಜಾಗ್ರತಿ ಕಾರ‍್ಯಕ್ರಮಕ್ಕೆ ಅವಕಾಶ ಕಲ್ಪಿಸಿದಕ್ಕೆ ಧನ್ಯವಾದ ಸಮರ್ಪಿಸಿ ಸದಸ್ಯರು ನೇತ್ರದಾನ ಮಾಡುವಂತೆ ಪ್ರೇರೇಪಿಸಿದರು.

300x250 AD

ಕಾರ‍್ಯಕ್ರಮದಲ್ಲಿ ಟಿ.ಎಸ್.ಎಸ್.ನ ನಿರ್ದೇಶಕರಾದ ನರಸಿಂಹ ಹೆಗಡೆ ಬಾಳೆಗದ್ದೆ ಮಾತನಾಡಿ ಕಾರ‍್ಯಕ್ರಮದಿಂದಾಗಿ ನೇತ್ರದಾನದ ಕುರಿತಾಗಿ ಸಂಪೂರ್ಣ ಮಾಹಿತಿಗಳ ಅರಿವು ಮೂಡಿತು ಮತ್ತು ಡಾ. ಶಿವರಾಮ್ ಕೆ.ವಿ.ಯವರು ಅತ್ಯಂತ ಸುಂದರವಾಗಿ ಸಮರ್ಪಕವಾಗಿ ನಮ್ಮಲ್ಲಿ ಜಾಗೃತಿ ಮೂಡಿಸಿದಕ್ಕೆ ಧನ್ಯವಾದ ಸಮರ್ಪಿಸಿದರು. ತಾವೂ ಹೆಚ್ಚಿನ ಜನರಲ್ಲಿ ನೇತ್ರದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವುದಾಗಿ ತಿಳಿಸಿದರು. ರವೀಂದ್ರ ಎಸ್ ಹೆಗಡೆ ಹಳದೋಟ, ಪ್ರಭಾರಿ ಪ್ರಧಾನ ವ್ಯವಸ್ಥಾಪಕ ಗಿರೀಶ ಸಿ. ಹೆಗಡೆ ಸಂಕದಮನೆ, ಸಂಘದ ಸಿಬ್ಬಂದಿಗಳು, ಸದಸ್ಯರು ಉಪಸ್ಥಿತರಿದ್ದರು. ಗಣೇಶ ನೇತ್ರಾಲಯದ ಪರವಾಗಿ ಕಿರಣ ಭಟ್ಟ, ತಾಂತ್ರಿಕ ಸಹಾಯಕರು, ವಿನಾಯಕ ಶಿರೋಡಕರ್, ಪಬ್ಲಿಕ್ ರಿಲೇಶನ್ ಆಫೀಸರ್, ರಾಜು, ಐ ಬ್ಯಾಂಕ್ ಮ್ಯಾನೇಜರ್ ಉಪಸ್ಥಿತರಿದ್ದರು. ಖ್ಯಾತ ಬರಹಗಾರ ಶಿವಾನಂದ ಕಳವೆ ಭಾಗಿಯಾಗಿದ್ದರು. ಸಹಾಯಕ ವ್ಯವಸ್ಥಾಪಕ ಗೋಪಾಲ ಹೆಗಡೆ ಕಾರ‍್ಯಕ್ರಮ ನಿರೂಪಣೆ ನೆರವೇರಿಸಿದರು.

Share This
300x250 AD
300x250 AD
300x250 AD
Back to top