ಕಾರವಾರ: ಇಲ್ಲಿನ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಹಿಂಭಾಗದ ಪ್ರದೇಶದ ಮುಳ್ಳಿನ ಪೊದೆಗಳ ನಡುವೆ ನವಜಾತ ಶಿಶುವೊಂದು ಪತ್ತೆಯಾಗಿದೆ.
ಕಾಜುಭಾಗದಿಂದ ಕೂರ್ಸೆವಾಡಕ್ಕೆ ತೆರಳುವ ದಾರಿ ಅಂಚಿನ ಪ್ರದೇಶದ ವಿಜಯವಾಡ ಎಂಬ ಪ್ರದೇಶದಲ್ಲಿ ಸಾಕಷ್ಟು ಪೊದೆಗಳು ಬೆಳೆದಿದ್ದು, ಅಲ್ಲಿ ನವಜಾತ ಹೆಣ್ಣು ಮಗುವನ್ನು ದುಷ್ಕಮಿಗಳು ಎಸೆದು ಹೋಗಿದ್ದು, ಮುಳ್ಳಿನ ನಡುವೆ ಬಿದ್ದ ಮಗುವನ್ನು ಸಾರ್ವಜನಿಕರು ರಕ್ಷಿಸಿದ್ದಾರೆ.
ಮಗು ಅಳುವ ಸದ್ದು ಕೇಳಿಸೊಕೊಂಡ ಸ್ಥಳೀಯರು ಹುಡುಕಾಟ ನಡೆಸಿದ್ದು, ಆಗ ಅಲ್ಲಿ ಎರಡು ತಾಸಿನ ಹಿಂದೆ ಜನಿಸಿದ ಮಗು ಕಾಣಿಸಿದೆ. ತಕ್ಷಣ ಆಸ್ಪತ್ರೆ ಸಿಬ್ಬಂದಿ ನೆರವು ಯಾಚಿಸಿ ಮಗುವಿನ ಜೀವ ಕಾಪಾಡಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಗಮನಿಸಿ, ಮಗು ಎಸೆದವರ ಪತ್ತೆಗಾಗಿ ತನಿಖೆ ನಡೆಯುತ್ತಿದೆ.