Slide
Slide
Slide
previous arrow
next arrow

ಶೀಘ್ರವೇ ತಾಂತ್ರಿಕ ಸಮಸ್ಯೆ‌ ಪರಿಹರಿಸಿ ಏತ ನೀರಾವರಿ ಕಾರ್ಯ ಪ್ರಾರಂಭ: ಶಾಸಕ ಹೆಬ್ಬಾರ್

300x250 AD

ಬನವಾಸಿ: ರೈತರ ಹಿತದೃಷ್ಟಿಯಿಂದ ಈ ಭಾಗದಲ್ಲಿ ಕೆರೆ ತುಂಬುವ ಯೋಜನೆ ಜಾರಿಗೆ ತಂದಿದ್ದೇನೆ. ಆದರೆ ವಿದ್ಯುತ್ ಸಂಪರ್ಕಕ್ಕೆ ಕೆಲ ತಾಂತ್ರಿಕ ತೊಡಕು ಉಂಟಾಗಿದ್ದರಿಂದ ಏತ ನೀರಾವರಿ ಯೋಜನೆಯ ಕಾರ್ಯ ಆರಂಭವಾಗಿಲ್ಲ. ಶೀಘ್ರವೇ ಗ್ರಿಡ್ ಸಮಸ್ಯೆ ಬಗೆಹರಿಯಲಿದೆ ಎಂಬ ಭರವಸೆ ಇದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಸೋಮವಾರ ಸಮೀಪದ ಗುಡ್ನಾಪೂರ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿ ಅವರು, ಶಿವಮೊಗ್ಗ ಜಿಲ್ಲೆಯ ಜಡೆಯಿಂದ ಬನವಾಸಿ ಗ್ರಿಡ್‌ಗೆ ವಿದ್ಯುತ್ ಸಂಪರ್ಕ ಬರಲಿದೆ. ಖಾಸಗಿ ಜಾಗದಲ್ಲಿ 7 ಕಂಬ ಸ್ಥಾಪನೆ ಆಗಬೇಕಿದ್ದು, ಇದಕ್ಕೆ ಅಲ್ಲಿಯ ರೈತರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಹಿನ್ನಡೆ ಉಂಟಾಗಿದೆ. ಶೀಘ್ರ ಈ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ. ವಿದ್ಯುತ್ ಸಂಪರ್ಕವಾದ ಬಳಿಕ ಎರಡನೇ ಹಂತದ ಕೆರೆಗೆ ನೀರು ತುಂಬುವ ಯೋಜನೆಯನ್ನೂ ಆರಂಭಿಸುತ್ತೇವೆ.ಐತಿಹಾಸಿಕ ಗುಡ್ನಾಪುರ ಕೆರೆ ತುಂಬಿರುವುದರಿಂದ ಇಲ್ಲಿಯ ಸಾವಿರಾರು ಎಕರೆ ರೈತರ ಕೃಷಿಗೆ ಪೂರಕವಾಗಲಿದೆ ಎಂದರು.

ಆರ್.ವಿ.ದೇಶಪಾಂಡೆ ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷಿಯಾದರೆ ಸಂತಸ. ಉತ್ತರ ಕನ್ನಡ ಜಿಲ್ಲೆಗೆ ದಿ. ರಾಮಕೃಷ್ಣ ಹೆಗಡೆ ಅವರ ಬಳಿಕ ಮುಖ್ಯಮಂತ್ರಿ ಸ್ಥಾನ ಬಂದಿದೆ ಎಂದು ನಾವೆಲ್ಲ ಸಂತಸ ವ್ಯಕ್ತಪಡಿಸುತ್ತೆವೆ. ಇದರಲ್ಲಿ ರಾಜಕೀಯ ಪ್ರಶ್ನೆ ಬರುವುದಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ವಾಂಗೀಣ ಅಭಿವೃದ್ಧಿ ಆಗಬಹುದು, ಆಗಬೇಕು. ಕಾಂಗ್ರೆಸ್‌ನಲ್ಲಿ 136 ಶಾಸಕರಿದ್ದಾರೆ. ಯಾರಿಗೆ ಮುಖ್ಯಮಂತ್ರಿ ಸ್ಥಾನ ಎಂಬುದು ಆ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಹಳಿಯಾಳ ಘಟನೆ ಕುರಿತು ಪ್ರತಿಕ್ರಯಿಸಿದ ಹೆಬ್ಬಾರ್, ಬಿಜೆಪಿ ಶಿಸ್ತಿನ ಪಕ್ಷ ಎಂದು ಕೊಂಡಿದೆ. ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ಜಿಲ್ಲೆಯಲ್ಲಿ ಶಿಸ್ತಿನ ಪಕ್ಷಕ್ಕೆ ಎಲ್ಲವೂ ಗೊತ್ತಾಗಲಿದೆ. ಬಸವನಗೌಡ ಪಾಟೀಲ ಯತ್ನಾಳ ವಿಧಾನಸಭೆಯ ಒಳಗೂ ಹೊರಗೂ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ‌. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಅವರನ್ನು ಪಕ್ಷ ಏನು ಮಾಡಲು ಸಾಧ್ಯವಾಯಿತು? ನಮ್ಮಂತವರು ಮಾತನಾಡಿದರೆ ಸಿಟ್ಟು ಮಾಡುತ್ತಾರೆ. ಬಡವ ತಿಂದರೆ ಹೊಟ್ಟೆಗಿಲ್ಲದೇ ತಿಂದ, ಶ್ರೀಮಂತ ತಿಂದರೆ ಔಷಧಕ್ಕೆ ತಿಂದ ಎನ್ನುವ ಸ್ಥಿತಿ ಬಿಜೆಪಿಯಲ್ಲಿದೆ ಎಂದರು.

300x250 AD

ಕಾರ್ಯಕ್ರಮದಲ್ಲಿ ಪ್ರಮುಖರು, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.


ನನ್ನ ಭವಿಷ್ಯದ ಬಗ್ಗೆ ಕಾದು ನೋಡಲಿ‌. ಜನರ ಮಧ್ಯದಲ್ಲಿ ನಾವಿದ್ದೇವೆ.ನಾವು ಸಾಕು ಎಂದು ಹೊರಟರೂ ಜನರು ಬೇಕು ಎನ್ನುತ್ತಿದ್ದಾರೆ.ಹಾಗಾಗಿ ಕೆಲಸ ಮಾಡುತ್ತಿದ್ದೇನೆ.ಜನರ ಯಾವ ಉತ್ತರಕ್ಕೂ ನಾವು ಗಟ್ಟಿಯಿದ್ದೆವೆ.ಅದರ ಬಗ್ಗೆ ಕಾಗೇರಿಯವರು ಚಿಂತೆ ಮಾಡುವ ಅವಶ್ಯಕತೆ ಇಲ್ಲ.–
ಶಾಸಕ ಶಿವರಾಮ ಹೆಬ್ಬಾರ.

Share This
300x250 AD
300x250 AD
300x250 AD
Back to top