ಶಿರಸಿ: ಲಯನ್ಸ್ ಕ್ಲಬ್ ಶಿರಸಿಯ ಮುಂದಾಳುತ್ವದಲ್ಲಿ ಶಿರಸಿ ನಗರದ ಲಯನ್ಸ್ ವೃತ್ತದಿಂದ ಯಲ್ಲಾಪುರ ನಾಕಾ ವೃತ್ತದವರೆಗಿನ ಸುಮಾರು 800ಮೀಟರ್ ದೂರದ ರಸ್ತೆ ವಿಭಜಕಗಳ ನಡುವೆ ದಾಖಲೆಯ ಏಳು ಘಂಟೆಗಳ ಅವಧಿಯಲ್ಲಿ ಹೂವಿನ ಗಿಡಗಳನ್ನು ನೆಟ್ಟು, ನೆಟ್ಟ ಗಿಡಗಳಿಗೆ ರಕ್ಷಣಾ ಕವಚವಚಗಳನ್ನು ಹಾಕಿ, ವನಮಹೋತ್ಸವ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಶಿರಸಿಯ ಸದಸ್ಯರು, ಲಿಯೋ ಕ್ಲಬ್ ಶಿರಸಿಯ ಸದಸ್ಯರು, ಇಂಜನೀಯರ್ಸ್ ಅಸೋಸಿಯೇಶನ್ ಶಿರಸಿಯ ಸದಸ್ಯರೆಲ್ಲರೂ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಶ್ರಮದಾನ ಮಾಡಿದರು. ಅಷ್ಟಲ್ಲದೇ ಪ್ರತಿ ತಿಂಗಳ ಭಾನುವಾರಗಳಂದು ಉದ್ದೇಶಿತ ನಿರ್ವಹಣಾ ಕಾರ್ಯಕ್ರಮವನ್ನೂ ಸಹ ನೆರವೇರಿಸಿಕೊಂಡು ಬರಲಾಗುತ್ತಿದೆ. ಇದೊಂದು ಉತ್ತಮ ಸಮಾಜಮುಖಿ ಹಾಗೂ ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪಾಲ್ಗೊಂಡು, ಇದರ ಯಶಸ್ಸಿನ ರೂವಾರಿಗಳಾಗಿ ಸಹಕರಿಸಿದ ಎಲ್ಲ ಮಹನೀಯರಿಗೂ ಹಾಗೂ ಗಿಡಗಳನ್ನು ನೆಡಲು ಸ್ಥಳಾವಕಾಶ, ಪರವಾನಿಗೆ ನೀಡಿರುವ ಎಲ್ಲಾ ಅಧಿಕಾರಿ ವರ್ಗದವರಿಗೂ ಲಯನ್ಸ್ ಕ್ಲಬ್ ಶಿರಸಿಯ ಸರ್ವ ಸದಸ್ಯರ ಹಾಗೂ ಪದಾಧಿಕಾರಿಗಳ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.