Slide
Slide
Slide
previous arrow
next arrow

ಸೇತುವೆ ತಡೆಗೋಡೆ ಎತ್ತರಿಸಲು ಮನವಿ ಸಲ್ಲಿಕೆ

300x250 AD

ಕಾರವಾರ: ರಾಷ್ಟ್ರೀಯ ಹೆದ್ದಾರಿಯ ಕೋಡಿಭಾಗ ಕಾಳಿ ನೂತನ ಸೇತುವೆಯ ಬದಿಯಲ್ಲಿರುವ ತಡೆಗೋಡೆ ಸ್ವಲ್ಪ ಎತ್ತರಕ್ಕೆ ಏರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷರಾದ ರಾಜಾ ನಾಯ್ಕ ಉತ್ತರಕನ್ನಡ ಜಿಲ್ಲಾಧಿಕಾರಿಗೆ ವಾಟ್ಸಾಪ್ ಹಾಗೂ ಇಮೇಲ್ ಮೂಲಕ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಹೆದ್ದಾರಿ 66 ರ ಕಾರವಾರ ಗೋವಾ ಮಾರ್ಗದ ಕಾರವಾರ ನಗರದ  ಹೊರವಲಯದಲ್ಲಿರುವ ಕಾಳಿ ಹಳೆಯ ಸೇತುವೆ ಕೆಲವು ದಿನಗಳ ಹಿಂದೆ ಮುರಿದು ಬಿದ್ದ ಕಾರಣ ಪಕ್ಕದ ನೂತನ ಸೇತುವೆ ಮೇಲಿಂದ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದನ್ನು ಬಿಟ್ಟರೆ ಬೇರೇನೂ ಮಾಡಲು ಸಾಧ್ಯವಿಲ್ಲ. ಆದರೆ ಪಾದಚಾರಿಗಳಿಗೆ ಸೈಕಲ್,ಬೈಕ್ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ. ಏಕೆಂದರೆ ಕಾರು ಲಾರಿ ಖಾಸಗಿ ವಾಹನ ಚಾಲಕರು ವೇಗವಾಗಿ  ಸೇತುವೆಯ ಮೇಲಿಂದ ತಮ್ಮ ವಾಹನಗಳನ್ನು ಓಡಿಸುತ್ತಿದ್ದಾರೆ.  ಇದರಿಂದಾಗಿ ಸೈಕಲ್ ಬೈಕ್ ಕಿರು ವಾಹನ ಓಡಿಸುವರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಅಷ್ಟೆಯಲ್ಲದೇ ಸೇತುವೆ ದಾಟುವ ಪಾದಚಾರಿಗಳು ಶಾಲೆಗೆ ತೆರಳುವ ಮಕ್ಕಳು ಕೂಡಾ ತಂತಿ ಮೇಲಿನ ದಾರಿ ಎಂಬಂತೆ ಪ್ರಯಾಣ ಮಾಡುತ್ತಿದ್ದಾರೆ. ಮತ್ತು ಈ ಸೇತುವೆಯ ಎರಡೂ ಕಡೆಯಿಂದ ಓಡಾಡುವ ಎಲ್ಲಾ ವಾಹನಗಳು ವೇಗದ ಮಿತಿ ಕಡಿಮೆ ಮಾಡದೇ ತುಂಬಾ ವೇಗವಾಗಿ ಚಲಿಸುತ್ತಿದ್ದಾರೆ. ಇದ್ದರಿಂದ ತೀವ್ರ ಇಕ್ಕಟ್ಟಾದ ಕಾಳಿ ಸೇತುವೆಯ ಮೇಲೆ  ಸೈಕಲ್ ಬೈಕ್ ತಡೆಗೋಡೆಗೆ ಬದ್ದರೆ ಕಾಳಿ ನದಿಯ ಕೆಳಗಿನ ಆಳ ಕಾಣುತ್ತದೆ. ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್‌ಬಿ ಕಂಪನಿಯವರು ಕೂಡಾ ನೂತನ ಸೇತುವೆಯ ಕುರಿತು ಎಚ್ಚೆತ್ತುಕೊಳ್ಳಬೇಕು.ಈ ಸೇತುವೆಯ ತಡೆಗೋಡೆ ಚಿಕ್ಕದಾಗಿದ್ದು  ಮುಖ್ಯ ಕಾರಣವಾಗಿದ್ದಲ್ಲದೇ  ಈ ಸೇತುವೆ ಭವಿಷ್ಯದಲ್ಲಿ ಒನ್ ವೇವ್ ಗೆ ಮಾತ್ರ ಐಆರ್‌ಬಿ ಕಂಪನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮಾಡಿದಂತಿದೆ.ಈ ಸೇತುವೆಯ ತಡೆಗೋಡೆ ಮಾನವನ ಸೊಂಟದ ಮಟ್ಟದಲ್ಲಿ ಇದೆ. ಆದ್ದರಿಂದ ಈ ನೂತನ ಸೇತುವೆ ತಡೆಗೋಡೆ ಸ್ವಲ್ಪ ಎತ್ತರ ಮಾಡಬೇಕಾಗಿದೆ. ಸಧ್ಯದ ಮಟ್ಟಿಗೆ  ತಡೆಗೋಡೆ ಮೇಲೆ ಕಬ್ಬಿಣದ ದೊಡ್ಡ ಪೈಪ್‌ಗಳಿಂದ ತಡೆಗೋಡೆ ಎತ್ತರಕ್ಕೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇವೆ.ಆದ್ದರಿಂದ ಮತ್ತೊಂದು ದಿನ ಆಗುವ ಅಪಾಯ ತಪ್ಪಿಸಬೇಕಾಗಿದೆ. ಎಂದು  ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷರಾದ ರಾಜಾ ನಾಯ್ಕ ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

300x250 AD
Share This
300x250 AD
300x250 AD
300x250 AD
Back to top